ಕೃಷಿ ಭೂಮಿ ನೆಚ್ಚಿಕೊಂಡ ವಕೀಲೆ – ಮಹಿಳೆಯರಿಗೆ ಸ್ಪೂರ್ತಿಯಾದ “ಸುಕನ್ಯಾ” ಉಡುಪಿ ಟೈಮ್ಸ್ ವಾರದ ವ್ಯಕ್ತಿ

ಕೃಷಿ ಎಂದ ಕೂಡಲೇ ತುಂಬಾ ಕಷ್ಟಕರವಾದ ಕೆಲಸ ಎಂದೂ ಮೂಗು ಮುರಿಯುವವರೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ವೃತ್ತಿಯಲ್ಲಿ ವಕೀಲೆಯಾಗಿದ್ದರು ಕೃಷಿಭೂಮಿಯನ್ನ ಹಸನು ಮಾಡುವ ಇವರ ಕಾಯಕ್ಕೆ ಎಲ್ಲರೂ ಬೆರಗಾಗಿದ್ದಂತೂ ಸತ್ಯ. ಮನಸಿದ್ದರೆ ಮಾರ್ಗವಿದೆ ಎಂಬ ಮಾತಿನಂತೆ ಸಮಗ್ರ ಕ್ರಷಿಯನ್ನ ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆಯನ್ನ ಮಾಡಿರುವ ಸಾಧಕಿ ಸುಕನ್ಯಾ ಎಚ್. ಉಡುಪಿ ಟೈಮ್ಸ್ ನ  ವಾರದ ವ್ಯಕ್ತಿ.  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಮ್ಮಲ್ಲಿರುವ ಸ್ವಲ್ಪ ಜಾಗದಲ್ಲಿ ಸಮಗ್ರ ಕೃಷಿಯನ್ನ ಮಾಡಿ ಅನೇಕ ಜನ ಮಹಿಳೆಯರಿಗೆ ಸ್ಪೂರ್ತಿಯಾದವರು ತಮ್ಮ ಕೃಷಿ ಜೀವನದ ಪಯಣವನ್ನ ಉಡುಪಿ ಟೈಮ್ಸ್ ಜೊತೆ ಹಂಚಿಕೊಂಡಿದ್ದಾರೆ

ಕೃಷಿ ಭೂಮಿಯತ್ತ ನಿಮ್ಮ ಸೆಳೆತ ಆರಂಭವಾಗಿದ್ದು ಹೇಗೆ?

ಸುಕನ್ಯಾ – ಕೃಷಿ ಭೂಮಿಯ ಬಗ್ಗೆ ನಂಗೆ ಬಾಲ್ಯದಿಂದಲೂ ಆಸಕ್ತಿ ಇದ್ದಿತ್ತು ಹಾಗು ನನ್ನ ತಂದೆ ತಾಯಿ ಕೂಡ ಕೃಷಿಕರಾಗಿದ್ದರು ಹಾಗಾಗಿ ನನ್ನ ಮನಸು ಕೃಷಿಯತ್ತ ಸಾಗಿತು. ಇದೀಗ ನಮ್ಮ ಸಣ್ಣ ಜಾಗದಲ್ಲಿ ಬೇರೆ ಬೇರೆ ರೀತಿಯ ತರಕಾರಿ,ಅಣಬೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ಭತ್ತ ಕೃಷಿ, ಜೇನು ಸಾಕಾಣಿಕೆ, ತೆಂಗು ಅಡಿಕೆ ತೋಟ ಹೀಗೆ ಸಮಗ್ರ  ಕ್ರಷಿಯನ್ನ ನಂಬಿದ್ದೇನೆ.      ಮದುವೆಯಾದ ಮೇಲೆ ನನ್ನ ಪತಿ ಹರಿದಾಸ್ ರವರು ಕೃಷಿಯ ಬಗ್ಗೆ ಆಸಕ್ತಿ ಇದೆ. ಹಾಗು ಸಮಾಜಕ್ಕೆ ನಮ್ಮಿಂದ ಏನಾದರು ಸಹಾಯ ಮಾಡಬೇಕು. ಹಾಗು ಸಮಾನತೆಯ ಸಮಾಜದ ಕನಸನ್ನು ಹೊತ್ತವರು ಹಾಗಾಗಿ ನಮ್ಮ ಕೃಷಿ ಭೂಮಿಯ ಬಗ್ಗೆ ನನಗಿರುವ ಆಸಕ್ತಿಗೆ ಪ್ರೋತ್ಸಹ ನೀಡಿದರು. 1996 ರಿಂದ ವಕೀಲೆಯ ವೃತ್ತಿಯಲ್ಲಿರುವ ನನಗೆ ನನ್ನ ವೃತ್ತಿಯ ಜೊತೆಗೆ ಏಕೆ ಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಂಘ, ಅಳದಂಗಡಿ ತೋಟಗಾರಿಕಾ ಇಲಾಖೆ ದ. ಕ ಜಿಲ್ಲಾ ಸಹಕಾರಿ ಆಸ್ಪತ್ರೆ ಹೀಗೆ ಅನ್ನುವ ಸಂಸ್ಥೆಗಳು ನಮ್ಮ ಮುತುವರ್ಜಿಯಿಂದ ಆರಂಭವಾಗಿದೆ, ಹಾಗಾಗಿ ಈ ಕೆಲಸದ ಒತ್ತಡದಿಂದ ನನ್ನ ವೃತ್ತಿ ಜೀವನ ಸ್ವಲ್ಪ ನಿಭಾಯಿಸಲು ಕಷ್ಟವಾಗಿದೆ. 

ನೀವು ಮಾಡಿರುವ ಅಣಬೆ ಕೃಷಿಯ ಬಗ್ಗೆ ತಿಳಿಸಿ ? ಇದು ಲಾಭದಾಯಕವೇ?

ಸುಕನ್ಯಾ-ಯಾವುದೇ ಕೃಷಿಯಾದರು ಕೂಡಲೇ ಹಣ ಮಾಡಬೇಕು ಅನ್ನುವುದು ಸಾಧ್ಯವಿಲ್ಲ ಆದರೆ ಇದನ್ನ ಪರಿಶ್ರಮದಿಂದ ಮಾಡಿದ್ದಲ್ಲಿ ನಮ್ಮ ಜೀವನ ಸುಂದರವಾಗುವುದು ಹಾಗು ನಮ್ಮ ಜೀವನಕ್ಕೆ ಆದಾಯವಾಗುವುದು. ಈ ಅಣಬೆಯ ಕೃಷಿಯು ಮಹಿಳೆಯರು ಸುಲಭವಾಗಿ ಮಾಡುವ ಕೃಷಿ ಇದರ ಮರುಕಟ್ಟೆಯನ್ನ ನಾವೇ ಮಾಡಿದರೆ ಇದು ಲಾಭದಾಯಕ. ಇದರಲ್ಲಿ ಸೊಳ್ಳೆ ಕಾಟ ಹಾಗು ಹವಾಮಾನ ಏರುಪೇರು ಇದರ ಶತ್ರು. ಅದರ ಬಗ್ಗೆ ನಾವು ಬೆಳ್ತಂಗಡಿಯ ಕೃಷಿ ಇಲಾಖೆಯಲ್ಲಿ ತರಬೇತಿ ಪಡೆದುಕೊಂಡಿದ್ದೇವೆ . ಅಷ್ಟೇ ಅಲ್ಲದೆ ಬೇರೆ ಬೇರೆ ಕಡೆ ಗಳಲ್ಲಿ ಅಣಬೆ ಕೃಷಿಯ ಬಗ್ಗೆ ತರಬೇತಿ ನೀಡಿದ್ದೇವೆ, ಹಾಗು ಬೆಂಗಳೂರಿನ ಹುಲಿ ಮಾವಿನಲ್ಲಿ ನಡೆದ ತರಬೇತಿಯಲ್ಲಿ ನಾನು ಭಾಗಿ ಆಗಿದ್ದೆ.

ಸಮಗ್ರ ಕೃಷಿ ಲಾಭದಾಯಕವೇ ?

ಸುಕನ್ಯಾ– ಕಂಡಿತವಾಗ್ಲೂ ಲಾಭದಾಯಕ, ಉದಾಹರಣೆಗೆ ಹೆಚ್ಚಿನವರ ಪ್ರಕಾರ ಭತ್ತದ ಬೆಳೆಯನ್ನ ನಷ್ಟದ ಬೆಳೆ ಎನ್ನುತ್ತಾರೆ ಆದರೆ ಸಮಗ್ರ ಬೆಳೆಯಾಗಿ ಬೆಳಿಸಿದ್ದಲ್ಲಿ ಲಾಭವಿದೆ , ಅಕ್ಕಿ ಊಟಕ್ಕೆ ಆದರೆ, ಉಳಿದ ಭತ್ತ ಕೋಳಿ ಸಾಕಾಣಿಕೆ ಆಗುತ್ತೆ,  ಹುಲ್ಲು ಅಣಬೆ ಬೆಳೆಗೆ ಹಾಗು ಹೈನುಗಾರಿಕೆಗೆ ಸಹಾಯವಾಗುತ್ತದೆ, ಅಕ್ಕಿ ತವ್ಡ್ ಮೀನುಗಾರಿಕೆಗೆ, ಹಾಗು ಬತ್ತದ ಉಮಿ ಕೋಳಿಗೆ ನೆಲಕ್ಕೆ ಹಾಸಲು ಸಾಧ್ಯವಾಗುತ್ತದೆ. ಹಾಗಾಗಿ ಇದೀಗ ನಾವು ಹಡಿಲು ಬಿದ್ದ ಗದ್ದೆಗಳನ್ನು ಕೃಷಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆಲದಂಗಡಿ ತೋಟಗಾರಿಕಾ ಇಲಾಖೆಯಿಂದ ಸಮಗ್ರ ಕೃಷಿಯ ಬಗ್ಗೆ ರೈತರಿಗೆ ಮಾಹಿತಿಯನ್ನ ನೀಡಲಾಗುತ್ತಿದ್ದೆ. ಅಳದಂಗಡಿ ತೋಟಗಾರಿಕಾ ಕಂಪನಿ ಸರ್ಕಾರದಿಂದ ಸುಮಾರು 25  ಲಕ್ಷದ ಯಂತ್ರೊಪಕರಣಗಳು ಬಂದಿದ್ದು ಅದನ್ನು ರೈತರಿಗೆ ಕಡಿಮೆ ದರದಲ್ಲಿ ಕಳುಹಿಸಿ ಕೊಡಲಾಗುತ್ತಿದ್ದೆ.

ಮೀನು ಸಾಕಣೆಯ ಬಗ್ಗೆ ತಿಳಿಸಿ

ಸುಕನ್ಯಾ -ಎಲ್ಲಾ ಕೃಷಿಯಲ್ಲೂ ತಾಳ್ಮೆ ಹಾಗೂ ಗಮನ ಬೇಕೇ ಬೇಕು ಮೀನು ಸಾಕಣೆಯು ಕೂಡ ಹಾಗೆ ನೀರು ಕೆಡದಂತೆ ನೋಡಿಕೊಳ್ಳಬೇಕು ಹಾಗೂ ಮೀನಿಗೆ ಸರಿಯಾದ ಆಹಾರ ಅಂದ್ರೆ ಬತ್ತದ ತವುಡು ಹಾಗೂ ನೆಲಗಡಲೆ ಹಿಂಡಿಯನ್ನ ಆಗಾಗ ನೀಡುತ್ತಾ ಇದ್ದಲ್ಲಿ ಸುಮಾರು 8  ರಿಂದ 10  ತಿಂಗಳಿಗೆ ಇಳುವರಿ ನಮ್ಮ ಕೈ ಸೇರುತ್ತದೆ. ಇನ್ನು ಹಳ್ಳಿಯಲ್ಲಿ ನೈಸರ್ಗಿಕವಾದ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಬುದು ಇನ್ನು ಇದರ ನೀರನ್ನು ತರಕಾರಿಯ ಬುಡಕ್ಕೆ ತುಂಬಾ ಒಳ್ಳೇದು. ಹಾಗಾಗಿ ಮೀನಿನ ಜೊತೆ ತರಕಾರಿಯನ್ನ ಕೂಡ ರೈತರು ಬೆಳೆಯಬಹುದು.

ಸಮಗ್ರ ಕೃಷಿಯ ಆಯ್ಕೆಗೆ ಕಾರಣ? ಹಾಗು ಇದರಲ್ಲಿರುವ ಲಾಭಗಳು ?

ಸುಕನ್ಯಾ – ಸಮಗ್ರ  ಕ್ರಷಿಯನ್ನುವುದು ರೈತನಿಗೆ ವರ್ಷದುದ್ದಕ್ಕೂ ಆದಾಯ ಕೊಡುವಂತಹ ಪ್ರಕ್ರಿಯೆ. ಒಂದಲ್ಲ ಒಂದು ಬೆಳೆ ವರ್ಷದ ಉದ್ದಕ್ಕೂ ರೈತನ ಕೈ ಹಿಡಿಯುತ್ತದೆ. ಅಷ್ಟೇ ಅಲ್ಲದೆ ಪ್ರತಿಯೊಂದು ಬೆಳೆಯ ಇನ್ನೊಂದು ಬೆಳೆಗೆ ಅದರವಾಗಿರುತ್ತದೆ ಹಾಗಾಗಿ ರೈತರು ಆದಷ್ಟು ಸಮಗ್ರ ಬೆಳೆಗೆ ಒತ್ತು ನೀಡಬೇಕು.

ಮಹಿಳೆಯರಿಗೆ ಏನು ಹೇಳಲು ಬಯಸುತ್ತೀರಿ ?

ಸುಕನ್ಯಾ – ಮನೆಯಲ್ಲಿರುವ ಮಹಿಳೆಯರಿಗೆ ಅಣಬೆ ಕೃಷಿ ವರದಾನ ಅದೇ ರೀತಿಯಾಗಿ ಮಹಿಳೆಯರಿಗೆ ಅನುಕೂಲವಾಗಲು ನಾವು ಸ್ಪೂರ್ತಿ ಎನ್ನುವ ಸಂಸ್ಥೆಯನ್ನ ಪ್ರಾರಂಭಿಸಿದ್ದೇವೆ ಅಲ್ಲಿ ಮಹಿಳ್ಳೆಯರಿಗೆ ಸ್ವ ಉದ್ಯೋಗ ಅನುಕೂಲವಾಗುವಂತೆ ಮೀನು ಸಾಕಾಣಿಕೆಗೆ ಮೀನಿನ ಮರಿಗಳು ಸಾಕಲು ಬೇಕಾದ ಟರ್ಪಾಲು ಗಳು ಅದರ ಆಹಾರ ಇನ್ನು ಕೋಳಿ ಸಾಕಾಣಿಕೆಗೆ ಬೇಕಾದ ಕೋಳಿ ಮರಿಗಳು ಹಾಗೆಯೆ ಮಹಿಳೆಯರು ಸ್ವಯಂ ತಯಾರಿಸಿದ ಚಿಪ್ಸ್ , ಹಪ್ಪಳ , ಜಾಮ್ ಗಳು ಹೀಗೆ ಮೌಲ್ಯವರ್ಧನೆ ಮಾಡಿರುವ ತಿನಿಸುಗಳನ್ನು ಅವರಿಂದ ಪಡೆದು ಮಾರುಕಟ್ಟೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಇದರಿಂದ ಮಹಿಳೆಯರಿಗೆ ಕೃಷಿಯ ಬಗ್ಗೆ ಒಲವು ಮೂಡುತ್ತದ್ದೆ. ಹಾಗೆಯೆ ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸ್ವ ಮಾರುಕಟ್ಟೆ ಮಾಡುವುದು ಉತ್ತಮ.

ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿ ?

ಸುಕನ್ಯಾ – ಸರ್ಕಾರದಿಂದ ಸವಲತ್ತುಗಳು ಸಿಗುತ್ತದೆ ಆದರೆ ನಮಗೆ ಅದನ್ನು ಪಡೆದುಕೊಳ್ಳುವ ಬಗ್ಗೆ ನಮಗೆ ತಿಳಿದಿರಬೇಕು. ಅನೇಕ ಯೋಜನೆಗಳು ಸರಕಾರದಿಂದ ಕೃಷಿ ಹೊಂಡ ಮಾಡಲು , ಕೋಳಿ ಸಾಕಣೆಗೆ ಹೀಗೆ ಅನೇಕ ಯೋಜನೆಗಳಿವೆ ಆದರೆ ಅದರ ಬಗ್ಗೆ ನಮಗೆ ಗೊತ್ತಿರಬೇಕು. 

ನಿಮ್ಮ ಕನಸಿನ ಬಗ್ಗೆ ತಿಳಿಸಿ ?

ಸುಕನ್ಯಾ – ಮುಂದಿನ ಕನಸು ಇತ್ತೀಚಿಗೆ ಮಹಿಳೆಯರಿಗೆ ಬೀಡಿ ಕಾರ್ಯ ಕಡಿಮೆಯಾಗುತ್ತಿದ್ದೆಅಂತಹ ಮಹಿಳೆಯರಿಗೆ ಸ್ವ ಉದ್ಯೋಗದ ಅವಶ್ಯಕತೆಯಿದೆ ,ಗ್ರಾಹಕರಿಗೆ ಅತ್ಯುತ್ತಮವಾದ ಆಹಾರವಸ್ತುಗಳು ಸಿಕ್ಕುತ್ತದೆ, ನಮ್ಮ ಊರಲ್ಲಿ ನಾವು ಬೆಳೆಸಿದ ಉತ್ಪನ್ನಗಳು ಸಿಗುವಂತಾಗಬೇಕು ಇದೆ ನನ್ನ ಕನಸು.

ಅನೇಕ ಕನಸುಗಳೊಂದಿಗೆ ಭೂಮಿ ತಾಯಿಯನ್ನ ಆರಾಧಿಸುತ್ತಿರುವ ಸುಕನ್ಯಾರವರು ಅನೇಕ ಮಹಿಳೆಯರಿಗೆ ಪ್ರೇರಣೆ , ಕೃಷಿ ಭೂಮಿಯಲ್ಲಿ ಹೊಸ ಕ್ರಾಂತಿಯನ್ನ ಎಬ್ಬಿಸಲಿ ಎಂಬುದು ಉಡುಪಿ ಟೈಮ್ಸ್ ಆಶಯ ನಮ್ಮದು

Leave a Reply

Your email address will not be published. Required fields are marked *

error: Content is protected !!