ಉಡುಪಿ: ಜನರ ಮನ ಗೆದ್ದ “ಫಿಶ್ ಫ್ಯಾಕ್ಟರಿ” ರೆಸ್ಟೋರೆಂಟ್ಗೆ 5ನೇ ವರ್ಷದ ಸಂಭ್ರಮ
ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಜನತೆಗೆ ಶುಚಿರುಚಿಯಾದ ಮೀನಿನ ಖಾದ್ಯಗಳನ್ನು ಉಣಬಡಿಸುತ್ತಿರುವ ಹೆಸರಾಂತ ಹೊಟೇಲ್ “ಫಿಶ್ ಫ್ಯಾಕ್ಟರಿ” ರೆಸ್ಟೋರೆಂಟ್ ತನ್ನ ಗ್ರಾಹಕ ಸೇವೆಯನ್ನು 5 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಉಡುಪಿ ಅಲಂಕಾರ್ ಚಿತ್ರಮಂದಿರದ ಹಿಂಬದಿಯಲ್ಲಿರುವ ಗುರುಕೃಪಾ ಬಿಲ್ಡಿಂಗ್ನ 2ನೇ ಮಹಡಿಯಲ್ಲಿರುವ “ಫಿಶ್ ಫ್ಯಾಕ್ಟರಿ” ರೆಸ್ಟೋರೆಂಟ್ ನಲ್ಲಿ ಮೀನಿನ ಖಾದ್ಯಗಳನ್ನು ಒಮ್ಮೆ ಸವಿದವರು ಮತ್ತೊಮ್ಮೆ ಸವಿಯಲೇಬೇಕು ಎನ್ನುವಷ್ಟು ರುಚಿಕರವಾಗಿರುತ್ತದ್ದೆ.
ಇಲ್ಲಿ ತಾಜಾ ಮೀನಿನ ಫ್ರೈ, ಫಿಶ್ ಮಸಾಲ ಫ್ರೈ, ತವಾಫ್ರೈ, ಪುಳಿಮುಂಚಿ ಇವುಗಳನ್ನು ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸದೆ ತಯಾರು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ, ನಾಟಿ ಕೋಳಿ ಸುಕ್ಕ, ಬಿರಿಯಾನಿ, ನೀರ್ ದೋಸೆ, ಕಪ್ಪ ರೊಟ್ಟಿ, ಗೀರೋಸ್ಟ್, ಫಿಶ್ ಪ್ಲಾಟರ್, ಮರುವಾಯಿ ಸುಕ್ಕ, ಪುಂಡಿ ಗಸಿ, ಚೈನಿಸ್ ಫುಡ್ ದೊರೆಯುತ್ತದೆ.
ಸಭೆ ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆ ಹಾಗೂ ಹೋಟೆಲ್ನಿಂದ ಹೋಮ್ ಡೆಲಿವರಿ ಸೇವೆಗಳು ಇವೆ. ಹೆಚ್ಚಿನ ಮಾಹಿತಿಗಾಗಿ ಸಂಪಕಿಸಿ;-7090793927, 9481142057