ಉದ್ಯಾವರ ಸೇತುವೆಯಿಂದ ವ್ಯಕ್ತಿ ನದಿಗೆ ಹಾರಿರುವ ಶಂಕೆ
ಕಾಪು, ಡಿ.13(ಉಡುಪಿ ಟೈಮ್ಸ್ ವರದಿ ): ಇಲ್ಲಿನ ಉದ್ಯಾವರದ ಸೇತುವೆ ಮೇಲಿನಿಂದ ವ್ಯಕ್ತಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸಂಶಯದ ಮೇರೆಗೆ ಸಾರ್ವಜನಿಕರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸ್ಕೂಟಿ, ಚಪ್ಪಲಿ ದೊರೆತ ಹಿನ್ನೆಲೆ ಹುಡುಕಾಟ ಆರಂಭಿಸಿದ್ದು, ಕಾಪು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಉಡುಪಿಯ ಖಾಸಗಿ ಎಲೆಕ್ಟ್ರಾನಿಕ್ ಸಂಸ್ಥೆ ಉದ್ಯೋಗಿಯ ದ್ವಿಯ ವಾಹನ ಎಂದು ಸಂಶಯಿಸಲಾಗಿದೆ.