ಅಪ್ಪ ಅಮ್ಮ ಅನಾಥಾಲಯಕ್ಕೆ ಸಾಫಲ್ಯ ಟ್ರಸ್ಟ್‌‌ನಿಂದ ಇನ್ವರ್ಟರ್ ಕೊಡುಗೆ

ಉಡುಪಿ, ನ.17 (ಉಡುಪಿ ಟೈಮ್ಸ್ ವರದಿ): ಅಗತ್ಯವಿದ್ದವರನ್ನು ಗುರುತಿಸಿ ಅವರ ತೊಂದರೆಗಳನ್ನು ವಿಮರ್ಶೆ ಮಾಡಿ ಅವರಿಗೆ ಸಹಾಯವನ್ನು ಮಾಡುವ ಧ್ಯೆಯಗಳನ್ನು ಇಟ್ಟುಕೊಂಡ ಸಾಫಲ್ಯ ಟ್ರಸ್ಟ್ ಈ ಬಾರಿ ದೀಪಾವಳಿಗೆ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ ಕೊರಾಡಿ ಅಪ್ಪ ಅಮ್ಮ ಅನಾಥಾಲಯಕ್ಕೆ ಇನ್ವರ್ಟರ್ ನೀಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದರು.

ಸಾಫಲ್ಯ ಟ್ರಸ್ಟ್ ನ ಅಧ್ಯಕ್ಷರಾದ ರತ್ನ ಅಶೋಕ್ ಶೆಟ್ಟಿ ಅವರು ಇನ್ವರ್ಟರ್ ಖರೀದಿಗಾಗಿ ಚೆಕ್‌ನ್ನು ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು. ಹಾಗು ಈ ಮೊದಲೇ ಸುಮಾರು 10 ಹಾಸಿಗೆಗಳನ್ನೂ ಆಶ್ರಮಕ್ಕೆ ನೀಡಿದ್ದರು..

ಈ ಸಂದರ್ಭದಲ್ಲಿ PRO ಕವಿತಾ ಬಲ್ಲಾಳ್, ಸದಸ್ಯರಾದ ಸುಮಂಗಳಾ, ಪಾವನ, ಶಾಮೀಲಾ,‌ ಟ್ರಸ್ಟ್ ನ ಪ್ರವರ್ತಕರಾದ ನಿರುಪಮಾ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!