ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಧ್ವಜಾರೋಹಣ
ಕೋಟ (ಉಡುಪಿ ಟೈಮ್ಸ್ ವರದಿ): ಆಗಸ್ಟ್ 15 ರಂದು 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರಂತ ಥೀಮ್ ಪಾರ್ಕ್‌ನಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶ್ರೀಯುತ ನೀಲಾವರ ಸುರೇಂದ್ರ ಅಡಿಗರವರು ಧ್ವಜಾರೋಹಣವನ್ನು ನೆರವೇರಿಸಿ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರು ಅವರಿಗೆ ಬಾಲ್ಯದಿಂದಲೇ ದೇಶಾಭಿಮಾನದ ಬಗ್ಗೆ, ದೇಶದ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವನ್ನು ಮೂಡಿಸುವುದು ಅಗತ್ಯ. ಇದರಿಂದ ಅವರು ಸತ್ಪ್ರಜೆ ಆಗುವುದರಲ್ಲಿ ಸಂದೇಹವಿಲ್ಲ ಎಂಬುದಾಗಿ ನುಡಿದರು.
ಇದೇ ಸಮಯದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಹಸಿರು ಭಾರತ ಯೋಜನೆಯಡಿ ಆಯೋಜಿಸಲಾದ ಹಸಿರಿನೊಂದಿಗೆ ಸೆಲ್ಫಿ ಸ್ಪರ್ಧೆ ವಿಜೇತರಾದ ಆರಾಧ್ಯ ಸಾಲಿಗ್ರಾಮ, ವೈಷ್ಣವಿ ಶೃಂಗೇರಿ, ಪೂರ್ವಿಕ್ ಬೆಂಗಳೂರು, ಅಮೃತೇಶ್ ಕೋಟ, ಸಿದ್ದಾಂತ್ ಮಂಗಳೂರು ರವರಿಗೆ ಬಹುಮಾನವನ್ನು ವಿತರಿಸಲಾಯಿತು.
ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷರಾದ ರೊ. ವಿಷ್ಣುಮೂರ್ತಿ ಉರಾಳ, ಕಾರ್ಯದರ್ಶಿ ರೊ. ಶಿವಾನಂದ ನಾಯರಿ, ಮಾಜಿ ಸಹಾಯಕ ಗವರ್ನರ್ ರೊ. ಚಂದ್ರಶೇಖರ್ ಮೆಂಡನ್, ಮಾಜಿ ಅಧ್ಯಕ್ಷರುಗಳಾದ ರೊ. ಉದಯ್‌ಕುಮಾರ್ ಹೆಗ್ಡೆ, ರೊ. ಡಾ. ಗಣೇಶ್, ರೊ. ಸುಬ್ರಾಯ ಆಚಾರ್, ರೊ. ದಯಾನಂದ ಆಚಾರ್ ಸದಸ್ಯರುಗಳಾದ ರೊ. ಸುಭಾಶ್ಚಂದ್ರ ಶೆಟ್ಟಿ, ರೊ. ಸತೀಶ್ ಪೂಜಾರಿ, ರೊ. ನಿತೇಶ್ ಶೆಟ್ಟಿ, ಕಾರಂತ ಪ್ರತಿಷ್ಠಾನದ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ, ಕೋಟ ತಟ್ಟು ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಉಪಸ್ಥಿತರಿದ್ದರು.