ಮಂದಾರ್ಥಿ ಮೇಳದ ಹೆಸರಾಂತ ಸ್ತ್ರೀ ವೇಷಧಾರಿ ಕಲಾವಿದ ನಿಧನ

ಉಡುಪಿ ನ.25 : ಮಂದಾರ್ತಿ ಮೇಳದ ಕಲಾವಿದರಾಗಿದ್ದ ಚಂದ್ರ ನಾಯ್ಕ ನಂಚಾರು ಅವರು ನಿಧನರಾಗಿದ್ದಾರೆ.

ಚಂದ್ರ ನಾಯ್ಕ (29) ಅವರು ನ.24 ರಂದು ಸಾವನ್ನಪ್ಪಿದ್ದು, ಮೃತರು ಗರ್ಭಿಣಿ ಹೆಂಡತಿ ಮತ್ತು ಎರಡು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.

ಚಂದ್ರ ನಾಯ್ಕ ಐದಾರು ವರ್ಷ ಮಂದಾರ್ತಿ ಮೇಳದಲ್ಲಿದ್ದು ಕಳೆದ ಎರಡು ವರ್ಷದಿಂದ ಮೇಳಕ್ಕೆ ಹೋಗುತ್ತಿರಲಿಲ್ಲ. ಮೇಳದಲ್ಲಿ ಸ್ತ್ರೀವೇಷ ಹಾಕುತ್ತಿದ್ದ ಅವರು ಯಕ್ಷಗಾನ ಪ್ರಿಯರ ನೆಚ್ಚಿನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!