ಜನರ ಕೂಗಿಗೆ ಸ್ಪಂದಿಸದ ಅಧಿಕಾರಿಗಳು..ಕಾರ್ತಿಕ್ ಲೇ ಔಟ್ ಪ್ರದೇಶ ಜಲಾವೃತ
ಉಡುಪಿ- (ಉಡುಪಿ ಟೈಮ್ಸ್ ವರದಿ): ಉಡುಪಿಯ ತೆಂಕ ನಿಡಿಯೂರು ಕಾರ್ತಿಕ್ ಲೇ ಔಟ್ ಪ್ರದೇಶ ಮಳೆ ಬಂದಾಕ್ಷಣ ಬಹುತೇಕ ಮಳೆ ನೀರಿನಿಂದಾವೃತವಾಗುತ್ತಿದ್ದು ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಸ್ಥಳೀಯ ನಿವಾಸಿಗಳು ಗ್ರಾ.ಪಂ.ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ಪ್ರದೀಪ್ ಅವರು ನಮ್ಮ ಬಾವಿಯ ನೀರು ಚರಂಡಿಯ ನೀರಿನಿಂದ ತುಂಬಿ ಹೋಗಿದೆ ಎಂದರು. ಸ್ಥಳೀಯರು ಮಾತನಾಡಿ ಈ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗುವುದಕ್ಕೆ ಪೂರಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ಈ ಪ್ರದೇಶದಲ್ಲಿ ಶೇಖರಣೆಗೊಂಡು, ಕುಡಿಯುವ ಬಾವಿಯ ನೀರಿಗೆ ಹರಿಯುತ್ತಿರುವುದರಿಂದ ಈ ಮಳೆಗಾಲದಲ್ಲೂ ಕುಡಿಯುವ ನೀರಿಗೆ ನಾವು ಸಮಸ್ಯೆ ಅನುಭವಿಸುವಂತಾಗಿದೆ.
ಈ ಬಗ್ಗೆ ಸ್ಥಳೀಯ ತೆಂಕ ನಿಡಿಯೂರು ಗ್ರಾ.ಪಂ. ಪಿಡಿಓರವರಲ್ಲಿ ನಮ್ಮ ಸಮಸ್ಯೆಯನ್ನ ಲಿಖಿತ ರೂಪವಾಗಿ ನಾವು ನೀಡಿದ್ದೇವೆಯಾದರೂ ಅವರಿಂದ ಯಾವುದೇ ಸ್ಪಂದನೆ ಇಲ್ಲ, ಕಡೇ ಪಕ್ಷ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಸೌಜನ್ಯವನ್ನೂ ಆ ಅಧಿಕಾರಿ ಪ್ರದರ್ಶಿಸಿಲ್ಲ, ಅಧಿಕಾರಿಯ ದಿವ್ಯ ನಿರ್ಲಕ್ಷದಿಂದಾಗಿ ಈ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ…ಜನ ಮನೆಯಿಂದ ಹೊರ ಬರಲು ಅಸಾಧ್ಯವಾಗಿದೆ, ಈ ಬಗ್ಗೆ ಸಂಬಂಧಪಟ್ಟ ಜನಪ್ರತಿಗಳಾಗಲೀ…ಅಧಿಕಾರಿಗಳಾಗಲೀ ತಕ್ಷಣ ಸ್ಪಂಧಿಸಿ ನಮ್ಮ ಸಮಸ್ಯೆಯನ್ನು ನೀಗಿಸುವಂತೆ ಒತ್ತಾಯಿಸಿದ್ದಾರೆ.