ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಎಸ್ಎಸ್ಎಲ್ ಸಿ ಶೇ.100 ಫಲಿತಾಂಶ

ಉಡುಪಿ: ವಿದ್ಯೋದಯ ಟ್ರಸ್ಟ್ ಅಂಗಸಂಸ್ಥೆಯಾದ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ 100% ಫಲಿತಾಂಶ ದಾಖಲಿಸಿದೆ.

ಈ ಬಾರಿ 57 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು 28 ವಿದ್ಯಾರ್ಥಿಗಳು ಎ+' ಶ್ರೇಣಿಯಲ್ಲಿ, 17ವಿದ್ಯಾರ್ಥಿಗಳುಎ’ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಬಿ+' ಶ್ರೇಣಿಯಲ್ಲಿ ಮತ್ತು 1 ವಿದ್ಯಾರ್ಥಿಬಿ’ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಕಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದರು.

ಕುಮಾರಿ ಪಲ್ಲವಿ ರಾವ್ ಸಂಸ್ಕೃತದಲ್ಲಿ 125, ಇಂಗ್ಲೀಷ್ 97, ಕನ್ನಡ100 ಮತ್ತು ಗಣಿತದಲ್ಲಿ 100, ವಿಜ್ಞಾನ 99 ಹಾಗೂ ಸಮಾಜಶಾಸ್ತ್ರದಲ್ಲಿ 98 ಹೀಗೆ 619 ಅಂಕಗಳಿಸಿದ್ದಾರೆ.

ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!