ವಿಶ್ವ ಜನಸಂಖ್ಯಾ ದಿನಾಚರಣೆ
ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇವರ ಸಂಯುಕ್ತ ಆಶ್ರಯ ದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ 2019 ರೋಟರಿ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಿ ಮಾತನಾಡಿ, ಜನಸಂಖ್ಯೆಯ ಸ್ಥಿರತೆ ರಾಷ್ಟ್ರದ ಅಭಿವೃದಿಗೆ ಪೂರಕವಾಗಬಹುದು.ಜನಸಂಖ್ಯೆಯ ಹೇರಿಕೆಯಿಂದ ಅಗುವ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಜನಸಂಖ್ಯೆಯ ನಿಯಂತ್ರಣ ಅಗಬೇಕಾಗಿದೆ.
ಪ್ರಸ್ತುತ ಜನರನ್ನು ದೇಶದ ಆಸ್ತಿಯಾಗಿ ಬೆಳೆಸುವ ಕಾರ್ಯ ನಡೆಯಬೇಕು ಎಂದರು .
ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಬಂಗೇರ, ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ! ವಿಶ್ವೇಶ್ವರ್ ಭಟ್, ರೋಟರಿ ಕ್ಲಬ್ ನ ಆನ್ಸ್ ಅಧ್ಯಕ್ಷೆ ಡಾ! ಪ್ರತಿಭಾ ರೈ ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ವೈದ್ಯಾಧಿಕಾರಿ ಡಾ! ದೀಪಾ ಪ್ರಭು ಪ್ರಸ್ತಾವನೆಗೈದು ಸ್ವಾಗತಿಸಿದರು. ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಪ್ರಗತಿಸಾಧಿಸಿದ ಆರೋಗ್ಯ ಇಲಾಖಾ ಮಹಿಳಾ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಯರನ್ನು ಸನ್ಮಾನಿಸಲಾಯಿತು.
ಆರೋಗ್ಯ ಇಲಾಖಾ ಸಿಬ್ಬಂದಿ ಕುಸುಮ ವಂದಿಸಿದರು.ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು