ಟ್ರಾಫಿಕ್‌ ನಿಯಮಗಳ ಬಗ್ಗೆ ಅರಿವು ಮೂಡಿಸಿ:ಉಡುಪಿ ಟ್ರಾಫಿಕ್‌ ಸೆನ್ಸ್‌

ಉಡುಪಿ: ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸುವವರಿಗೆ ಕೇವಲ ದಂಡ ಹಾಕಿದರೆ ಸಾಲದು,ಅವರಿಗೆ ಟ್ರಾಫಿಕ್‌ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಆಗ್ರಹಿಸಿ ಉಡುಪಿ ಟ್ರಾಫಿಕ್‌ ಸೆನ್ಸ್‌ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಎಸ್ಪಿ ನಿಶಾ ಜೇಮ್ಸ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಯಾವ ರೀತಿಯಾಗಿ ವಾಹನ ಚಲಾಯಿಸಬೇಕು ಹಾಗೂ ಟ್ರಾಫಿಕ್‌ ನಿಯಮಗಳ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸಬೇಕು. ಕೇವಲ ದಂಡ ಹಾಕುವುದರಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆಯನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಾಗೃತಿಮೂಡಿಸುವುದು ಅಗತ್ಯ ಎಂದು ಮನವಿಯಲ್ಲಿ ಕೋರಲಾಗಿದೆ. ಶಾಲಾ ವಾಹನ ಚಾಲಕರಿಗೆ, ರಿಕ್ಷಾ ಚಾಲಕರಿಗೆ, ಆಹಾರ ಉತ್ಪನ್ನಗಳನ್ನು ಡೆಲಿವೆರಿಮಾಡುವವರಿಗೆ ಟ್ರಾಫಿಕ್‌ ನಿಮಯಗಳ ಮನದಟ್ಟು ಮಾಡಬೇಕು. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ನಿರ್ವಹಣೆ ಸರಿಯಲ್ಲ. ಹಾಗಾಗಿ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಿ ಸಂಚಾರ ದಟ್ಟನೆ ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಟ್ರಾಫಿಕ್‌ ನಿಯಮವನ್ನು ಉಲ್ಲಂಘಿಸಿದವರ ವಿಡಿಯೋಗಳನ್ನು ಸಾರ್ವಜನಿಕರು ಕಳುಹಿಸಿಕೊಟ್ಟರೆ ಅದನ್ನು ನಿರ್ಲಕ್ಷ್ಯ ಮಾಡದೆ ನಿಮಯ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹ ಪಡಿಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹಾಗಾಗಿ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಸಂಘಟನೆಯ ವತಿಯಿಂದ ಟ್ರಾಫಿಕ್‌ ನಿಯಮಗಳ ಬಗ್ಗೆ ಕಾರ್ಯಾಗಾರ ಆಯೋಜಿಸಲು ಚಿಂತನೆ ನಡೆಸಲಾಗಿದ್ದು, ಅದಕ್ಕೆ ಟ್ರಾಫಿಕ್‌ ನಿಯಮಗಳನ್ನು ಅರಿತಿರುವ ನುರಿತ ಅಧಿಕಾರಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕಳುಹಿಸಿಕೊಡಬೇಕು ಎಂದು ವಿನಂತಿಸಲಾಗಿದೆ. ನಿಯೋಗದಲ್ಲಿ ಸಂಸ್ಥೆಯ
ಡಾ.ಅಫ್ಸ್‌ಲ್ ಪಿ.ಎಂ, ದಿವ್ಯ ಹೆಗ್ಡೆ, ಡಾ.ಶಶಿಕಿರಣ್ ಉಮಾಕಾಂತ್
ಅಮೃತ್ ಶೆಣೈ, ಡಾ. ಕಿರಣ್ ವಿನುತ , ಸುಭಾಷ್ ಶಂಕಲ್ಕರ್,ಡಾ. ಆರತಿ ಹೆಬ್ಬಾರ್, ಡಾ.ಸಿಂಧೂರ ಲಕ್ಷೀ, ಡಾ.ಅರುಣ್ ಉರಳ, ರಶ್ಮೀ ಆರ್. ಚಂದ್ರ, ತೃಪ್ತಿ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!