ಭಾರತೀಯ ಮಹಿಳಾ ಹಾಕಿ ತಂಡದ ಕ್ರೀಡಾಪಟು ಸಿಯಾಮಿ ನಡೆಗೆ ವ್ಯಾಪಕ ಶ್ಲಾಘನೆ

ತಂದೆ ಸಾವಿನ ಸುದ್ದಿ ತಿಳಿದೂ ಪಂದ್ಯ ಮುಗಿಸಿ ಭಾರತಕ್ಕೆ ಮರಳಿ ದೇಶಾಭಿಮಾನ ತೋರಿದ ಭಾರತದ ಕ್ರೀಡಾಪಟು ಲಾಲ್‌ರೆಮ್ ಸಿಯಾಮಿ. ಭಾರತೀಯ ಮಹಿಳಾ ಹಾಕಿ ತಂಡದ ಕ್ರೀಡಾಪಟು ಲಾಲ್‌ರೆಮ್ ಸಿಯಾಮಿಯವರು ಎಫ್.ಐ.ಹೆಚ್ ಸಿರೀಸ್‌ನ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತ ತಂಡದ ಜೊತೆಗೆ ಜಪಾನಿನ ಹಿರೋಶಿಮಾಕ್ಕೆ ಹೋಗಿದ್ದರು. ಭಾರತವನ್ನು ಹಾಕಿಯಲ್ಲಿ ಪ್ರತಿನಿಧಿಸುವ ಹಾಕಿ ತಂಡದ ಭಾಗವಾಗಿದ್ದ ಈಕೆ ಬಹಳ ಉತ್ಸಾಹದಿಂದ ಜಪಾನ್‌ಗೆ ತೆರಳಿದ್ದರು. ಆದರೆ ಕಳೆದ ಶುಕ್ರವಾರ ದುರಾದೃಷ್ಟವಶಾತ್ ಅವರ ತಂದೆ ಮಿಝೋರಾಂನ ಕೋಲಾಸಿಯಾಬ್ ಜಿಲ್ಲೆಯ ಅವರ ಸ್ವಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ವಾರ್ತೆ ಲಾಲ್ರೆಮ್ ಸಿಯಾಮ್‌ಗೆ ತಲುಪಿದೆ.

 ಆದರೂ ಭಾನುವಾರ ತಮ್ಮ ತಂಡ ಫೈನಲ್ ಮ್ಯಾಚನ್ನು ಆಡಬೇಕಾಗಿದ್ದರಿಂದ ಆಕೆ ತನ್ನ ತಂಡವನ್ನು ಬಿಟ್ಟು ಬರಬಾರದೆಂದು, ತಂಡಕ್ಕೆ ತನ್ನ ಅವಶ್ಯಕತೆ ಇದೆ ಎಂದು ತಂದೆ ಸತ್ತ ದುಃಖವನ್ನು ನುಂಗಿಕೊಂಡು ಗಟ್ಟಿ ನಿರ್ಧಾರದಿಂದಾಗಿ ಪಂದ್ಯದಲ್ಲಿ ಭಾಗವಹಿಸಿ , ಅನಂತರ ಆಕೆ ತವರಿಗೆ ಮರಳಿ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸಿಯಾಮಿಯವರ ಈ ನಡೆಯಿಂದಾಗಿ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!