ಬಿಳಿ ಸಾಸ್ ಪಾಸ್ತ
ಮಕ್ಕಳು ಮನೆಯಲಿದ್ದಾಗೆ ಅವರಿಗೆ ಏನು ವಿಶೇಷ ತಿಂಡಿ ಮಾಡಿ ಕೊಡೋದು ಅನ್ನೋದೇ ದೊಡ್ಡ ತಲೆ ನೋವು. ಹಾಗಾಗಿ ನಿಮ್ಮ ನೆಚ್ಚಿನ ಪಾಕ ಟೈಮ್ಸ್ ನಲ್ಲಿ ಮಕ್ಕಳು ಮಾತ್ರವಲ್ಲದೆ ಎಲ್ಲರ ಬಾಯಲ್ಲೂ ನೀರು ತರಿಸುವ ಬಿಳಿ ಪಾಸ್ತ ಅಥವಾ ಕ್ರೀಮಿ ಪಾಸ್ತದ ರೆಸಿಪಿ ನಿಮಗಾಗಿ
ಬೇಕಾಗುವ ಸಾಮಗ್ರಿಗಳು
ಪಾಸ್ತಾ- ೧ ಕಪ್
ಬೆಣ್ಣೆ -3 ಚಮಚ
ಮೈದಾ – 3 ಚಮಚ
ಹಾಲು – 1 ಲೋಟ
ಬೆಳ್ಳುಳ್ಳಿ – 7 ಎಸಳು
ಮಿಕ್ಸೆಡ್ ಹರ್ಬ್ಸ್ -1 ಚಮಚ
ಚಿಲ್ಲಿ ಫ್ಲೆಕ್ಸ್ – 1 ಚಮಚ
ಈರುಳ್ಳಿ -2
ದೊಣ್ಣೆ ಮೆಣಸು -1
ಸಿಹಿ ಜೋಳ (ಸ್ವೀಟ್ ಕಾರ್ನ್)- 1 /2 ಕಪ್
ಕ್ಯಾರಟ್ – 1
ಉಪ್ಪು – ರುಚಿಗೆ ತಕಷ್ಟು
ಎಣ್ಣೆ
ಕರಿ ಮೆಣಸಿನ ಪುಡಿ- ಸ್ವಲ್ಪ
ಮಾಡುವ ವಿಧಾನ – ಮೊದಲಿಗೆ ಸ್ವಲ್ಪ ಎಣ್ಣೆ ಹಾಗು ನೀರು ಹಾಕಿ ಪಾಸ್ತಾ ಬೇಯಿಸಿ ಇಟ್ಟ್ಕೊಳ್ಳಿ, ನಂತರ ಮೈದಾವನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ , ಇದಕ್ಕೆ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಬಾಣಲಿಗೆ ಬೆಣ್ಣೆ ಅಥವಾ ಎಣ್ಣೆ ಹಾಕಿ ಇದಕ್ಕೆ ಬೆಳ್ಳುಳ್ಳಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ಹುರಿದ ಮಿಶ್ರಣಕ್ಕೆ ದೊಣ್ಣೆ ಮೆಣಸು ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ ಆಮೇಲೆ ಬೇಯಿಸಿದ ಕ್ಯಾರೆಟ್, ಸ್ವೀಟ್ ಕಾರ್ನ್ ಸೇರಿಸಿ ಬೇರೆ ತೆಗೆದಿಟ್ಟುಕೊಳ್ಳಿ . ನಂತರ ಒಂದು ಬಾಣಲೆಯನ್ನ ಒಲೆಯ ಮೇಲೆ ಇಟ್ಟು ಹಾಲು ಮೈದಾ ಪೇಸ್ಟನ್ನು ಹಾಕಿ ಕುದಿಸಿ , ಇದು ಕುದಿ ಬಂದ ನಂತರ ಮೊದಲೇ ಫ್ರೈ ಮಾಡಿರೋ ಸಾಮಗ್ರಿಗಳನ್ನು ಹಾಗು ಬೇಯಿಸಿದ ಪಾಸ್ತಾವನ್ನ ಸೇರಿಸಿ ರುಚಿಗೆ ತಕಷ್ಟು ಉಪ್ಪು ನಂತರ ಈ ಮಿಶ್ರಣಕ್ಕೆ ಕೊನೆಯದಾಗಿ ಚಿಲ್ಲಿ ಫ್ಲೆಕ್ಸ್ ಹಾಗು ಮಿಕ್ಸೆಡ್ ಹೆರ್ಬ್ಸ್, ಕರಿ ಮೆಣಸಿನ ಪುಡಿ ಹಾಕಿ. ನಂತರ ಚೀಸ್ ಜೊತೆ ಬಿಸಿ ಬಿಸಿ ಯಾಗಿ ಸವಿಯಿರಿ