ರಾಜಕೀಯ ಡೊಂಬರಾಟಕ್ಕೆ ಕೊನೆ ಎಂದು.!!?
ಇಡೀ ದೇಶವೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ,ನಮ್ಮ ರಾಜ್ಯ ಮಾತ್ರ ಪ್ರತಿದಿನ ಹೊಲಸು ರಾಜಕೀಯದಿಂದ ಸುದ್ದಿಯಾಗುತ್ತಿದೆ.. ಇಲ್ಲಿ ಅಧಿಕಾರದ ಆಸೆ ಬಿಟ್ಟರೆ, ಯಾರೊಬ್ಬರಿಗೂ ನಾಡಿನ ಅಭಿವೃದ್ಧಿ ಮುಖ್ಯವಲ್ಲ. ಯಾವ ಒಂದು ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ಇವರ ಈ ರಾಜಕೀಯ ಡೊಂಬರಾಟಕ್ಕೆ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ.
ಒಂದೆಡೆ ಕುರ್ಚಿಯ ವ್ಯಾಮೋಹ ಇನ್ನೊಂದೆಡೆ ಕುದುರೆ ವ್ಯಾಪಾರ. ದಿನಾ ಇದೇ ಆಟ.!!.
ಅದರಲ್ಲೂ ನಮ್ಮ ಕರಾವಳಿ ಭಾಗದ ಜನರ ಸಮಸ್ಯೆ ಆಲಿಸುವಷ್ಟು ಸಮಯವಿಲ್ಲದ ಮಾನ್ಯ ಮುಖ್ಯಮಂತ್ರಿಗಳಿಗೆ,ರಿಲ್ಯಾಕ್ಸ್ ಮಾಡಲು ಮಾತ್ರ ಇಲ್ಲಿನ ವಾತಾವರಣವೇ ಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಮೈಕ್ ಹಿಡಿದು ಬೊಬ್ಬೆರೆದ ಉಸ್ತುವಾರಿ ಸಚಿವರು ಈಗ ಎಲ್ಲಿ ಕಾಣೆಯಾಗಿದ್ದಾರೆ.?. ನಮ್ಮ ಜಿಲ್ಲೆಯಲ್ಲಿ ಅದೆಷ್ಟೋ ಸಮಸ್ಯೆಗಳಿವೆ.. ಪರಿಹಾರವಿಲ್ಲದೆ ಜನರು ಕಂಗಾಲಾಗಿದ್ದಾರೆ.
ಅಧಿಕಾರದ ಆಸೆಗೆ ರೆಸಾರ್ಟ್ ನಲ್ಲಿ ಕೂತು,ಎಲೆಕ್ಷನ್ ಬಂದಾಗ ಬೀದಿಗಿಳಿವ ರಾಜಕಾರಣ ಸಾಕಾಕಿದೆ.ಜನಪರ ಕೆಲಸ ಮಾಡುವ ಬಲಿಷ್ಠ ನಾಯಕರು ಬೇಕಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ರಾಜಕೀಯ ಪಕ್ಷಗಳು ಬೇಡ. ಹೊಸ ಬದಲಾವಣೆ ಬೇಕಿದೆ.. ಕರ್ನಾಟಕದಲ್ಲಿ ರಾಷ್ಟಪತಿ ಆಡಳಿತ ಬರುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕಿದೆ.
ರೂಪೇಶ್ ಜೆ.ಕೆ