ಪಕ್ಷ ಬೆಳೆಸಿ ನಾವೂ ಬೆಳೆಯಬೇಕು- ಗುರ್ಮೆ ಸುರೇಶ್ ಶೆಟ್ಟಿ.

ಕಾಪು ಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಯುಕ್ತ ಕಾಪು ಬಿಜೆಪಿ ಕಚೇರಿಯಲ್ಲಿ ವಿಸ್ತಾರಕ ಕಾರ್ಯಗಾರದಲ್ಲಿ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಕೇವಲ ಪ್ರಾಮಾಣಿಕ ಕೆಲಸ ಮಾಡಿದವರನ್ನು ಗುರುತಿಸುವ ಪರಿಪಾಠವಿದೆ. ಆದ್ದರಿಂದ ಸದಸ್ಯತ್ವ ಅಭಿಯಾನ ಮೂಲಕ ತಮ್ಮನ್ನು ತಾವು ತೊಡಗಿಸಿ ಪಕ್ಷದ ಮುಖ್ಯವಾಹಿನಿಗೆ ಬರಬೇಕೆಂದು ಕೇಳಿಕೊಂಡರು.

ಅಭಿಯಾನದ ಜಿಲ್ಲಾ ಸಂಚಾಲಕರಾದ ನವೀನ್ ಶೆಟ್ಟಿ ವಿಸ್ತಾರಕ್ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಇದೇ ತಿಂಗಳ 23 ನೇ ತಾರೀಕಿನಿಂದ 30ನೇ ತಾರೀಕು ತನಕ ಕಾಪು ಕ್ಷೇತ್ರದ 45 ಶಕ್ತಿ ಕೇಂದ್ರಗಳಿಗೆ ಜವಾಬ್ದಾರಿ ನೀಡಿದ ಪಕ್ಷದ ಪ್ರಮುಖರೆಲ್ಲರೂ ತಪ್ಪದೆ ಪ್ರತೀ ವಾರ್ಡ್ ಗೆ ಭೇಟಿ ನೀಡಿ ತಲಾ 200 ರ ಗುರಿ ತಲುಪುವಂತೆ ನೋಡಿಕೊಳ್ಳಬೇಕು, ಪ್ರತೀ ಬೂತ್ ನಲ್ಲಿ ಗಿಡ ನೆಡುವ ಕಾರ್ಯಕ್ರಮದೊಂದಿಗೆ ಸಂಘಟನೆಗೆ ಪೂರಕವಾಗಿರುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಮಗ್ರ ಮಾಹಿತಿ ನೀಡಿದರು.

ಕ್ಷೇತ್ರ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ ಪಕ್ಷ ಕಾಪು ಕ್ಷೇತ್ರಕ್ಕೆ ನೀಡಿದ ಗುರಿಗಿಂತ ಜಾಸ್ತಿ ಸದಸ್ಯತ್ವ ಮಾಡಿಸಿ ಜಿಲ್ಲೆಗೆ ಮೊದಲ ಸ್ಥಾನ ಬರುವಲ್ಲಿ ನಾವೆಲ್ಲ ಶ್ರಮಿಸೋಣ ಎಂದರು. ಪ್ರಧಾನ ಕಾರ್ಯದರ್ಶಿ ಮುರಳಿಧರ ಪೈ ನಿರೂಪಿಸಿದರೆ ಅಭಿಯಾನದ ಕಾಪು ಕ್ಷೇತ್ರ ಸಂಚಾಲಕರಾದ ಶ್ರೀಕಾಂತ ನಾಯಕ್ ಧನ್ಯವಾದ ಸಮರ್ಪಿಸಿದರು. ಸಹ ಸಂಚಾಲಕರಾದ ಶಿಲ್ಪ ಜಿ ಸುವರ್ಣ ಉಪಸ್ಥಿತರಿದ್ದರು. ಕಾಪು ಕ್ಷೇತ್ರದ 45 ಶಕ್ತಿ ಕೇಂದ್ರದ ವಿಸ್ತಾರಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!