ವೈದ್ಯರ ಮೇಲೆಯೂ ದೌರ್ಜನ್ಯ ಹೆಚ್ಚುತ್ತಿದೆ.ಡಾ. ಜಿ.ಎಸ್. ಚಂದ್ರಶೇಖರ್
ಉಡುಪಿ: ಇತ್ತೀಚಿನ ದಿನದಲ್ಲಿ ವೈದ್ಯರ ಮೇಲೆಯೂ ದೌರ್ಜನ್ಯ ಹೆಚ್ಚುತ್ತಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆಯ ನಡುವೆಯೂ ರೋಗಿಯನ್ನು ಉಳಿಸುವ ಸ್ಥಿತಿಯಲ್ಲಿ ವೈದ್ಯರಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.
ರೋಗಿ ಮೃತಪಟ್ಟರೂ ವೈದ್ಯಕೀಯ ಕೊರತೆಯ ಕಾರಣ ಮೃತರಾದರೂ ಜನ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆಂದು ಆಪಾದಿಸಿ ಹಲ್ಲೆ ನಡೆಯುತ್ತಾರೆ, ಇದರಿಂದಾಗಿ ಹಳ್ಳಿಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ ಎಂದರು.ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿ
ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ರಾಜ್ಯ ಸರಕಾರ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಳಿಸಿ, ಬಡವರನ್ನು ವೈದ್ಯಕೀಯ ಸೇವೆ ವಂಚಿತರನ್ನಾಗಿ ಮಾಡಿದೆ. ಇದರಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಯೋಜನೆ ಪ್ರತ್ಯೇಕವಾಗಿಸುವ ಜತೆಗೆ ಜಿಲ್ಲಾಸ್ಪತ್ರೆಗಳ ಶಿಫಾರಸ್ಸು ಪತ್ರ ಪಡೆಯುವ ಪದ್ಧತಿ ಕೈಬಿಡಲು ಮಳೆಗಾಲದ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಆಸ್ಪತ್ರೆ
ಆವರಣದಲ್ಲಿ ಭಾನುವಾರ ಆಯೋಜಿಸಿದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ವೈದ್ಯಕೀಯ ಕ್ಷೇತ್ರಕ್ಕೂ ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.
ಭಂಡಾರಿ ಮಾತನಾಡಿದರು. ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಪ್ರೊ. ಎ. ರಾಜಾ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಎಂ.ಎಸ್. ಉರಾಳ, ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಸಮಾಭದಲ್ಲಿ ಡಾ. ರಾಮ್‌ದಾಸ್ ಗೌಡ ಕಾಪು, ಡಾ. ಕೆ.ಎಸ್. ಶೆಣೈ ಕಾರ್ಕಳ, ಡಾ.
ಯಶೋಧರ ಎಂ. ಇರ್ವತ್ತೂರು, ಡಾ. ಚಿಕ್ಮರಿ ನಾಡ ಅವರನ್ನು ಸನ್ಮಾನಿಸಲಾಯಿತು. ಡಿ.ಕೆ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು