ಸೋಮಭಾಯ್ ಮೋದಿಯವರಿಂದ ವನಮಹೋತ್ಸವಕ್ಕೆ ಚಾಲನೆ
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ದುಡಿಯುತ್ತಿದ್ದು, ಇದೀಗ ಅವರು ದೇಶದ ಆಸ್ತಿಯಾಗಿದ್ದು, ನಾನು ಪ್ರಧಾನಿಯವರ ಸಹೋದರ ಅಲ್ಲ. ಕೇವಲ ನರೇಂದ್ರ ಮೋದಿ ಅವರ ಸಹೋದರ ಎಂದು ಗುಜರಾತಿನ ಸಾಮಾಜಿಕ ಕಾರ್ಯಕರ್ತ ಸೋಮಭಾಯ್ ಮೋದಿ ಹೇಳಿದ್ದಾರೆ.
ಅರ್ಕಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಅಖಿಲ ಕರ್ನಾಟಕ ಗಾಣಿಗ ಸಂಘದ ಕಾರ್ಯದರ್ಶಿ,ಬಿಜೆಪಿ ಮುಖಂಡ ಮಹೇಶ ತುಪ್ಪೆಕಲ್ಲು ಮನೆಗೆ ಭೇಟಿ ಅಂಜೂರ ಹಣ್ಣಿನ ಗಿಡ ನೆಡುವ ಮೂಲಕ ಅವರು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದಲ್ಲಿ ಮಳೆ-ಬೆಳೆ ಜೊತೆಗೆ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಕೂಡಾ ಅರಿತುಕೊಂಡು ಮರ ಗಿಡಗಳನ್ನು ನೆಡುವುದಕ್ಕಾಗಿ ಆಂದೋಲನ ನಡೆಸಬೇಕು ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ನೀಡಿ ಸೋಮಭಾಯ್ ಮೋದಿ ಅವರನ್ನು ಸನ್ಮಾನಿಸಲಾಯಿತು.
ಗುಜರಾತ್ ಬಿಜೆಪಿ ಘಟಕ ಅಧ್ಯಕ್ಷ ಲಲಿತ್ ಶಾ, ಅಖಿಲ ಕರ್ನಾಟಕ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿರಾಜಶೇಖರ ಗಾಣಿಗ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಗೀತಾಂಜಲಿ ಸುವರ್ಣ ಕಾಪು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ತಾರನಾಥ, ಹರೀಶ ಕುತ್ತಾರು, ವೆಂಕಟೇಶ್ ಕದ್ರಿ, ರವಿ ಒಡಿಯೂರು, ತಿರುಮಲೇಶ್ ಬೆಳ್ಳೂರು ಮತ್ತಿತರರು ಉಪಸ್ಥಿತಿದ್ದರು.