ಓಮದ ಕಾಳಿನ ಉಪಯೋಗ

ಅಡುಗೆಗೆ ಅಷ್ಟೇ ಅಲ್ಲ ಹಲವು ಸಮಸ್ಯೆಗಳ ನಿವಾರಣೆಗೆ ಓಮದ ಕಾಳು ಹೆಚ್ಚು ಸಹಕಾರಿಯಾಗಿ ಕೆಲಸ ಮಾಡುತ್ತದೆ, ಸಾಮಾನ್ಯವಾಗಿ ಕಾಡುವಂತ ಸಮಸ್ಯೆಗಳಿಗೆ ಇದು ಹೆಚ್ಚು ಸಹಕಾರಿಯಾಗಿದ್ದು ಇದು ಯಾವೆಲ್ಲ ಉಪಯೋಗಗಳನ್ನು ಹೊಂದಿದೆ ಅನ್ನೋದನ್ನ ಮುಂದೆ ತಿಳಿಸುತ್ತೇವೆ ನೋಡಿ.

ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸುವಂತ ಓಮದ ಕಾಳು ದೇಹದ ಸಮಸ್ಯೆಗಳಿಗೂ ರಾಮಬಾಣವಾಗಿದೆ, ಮನೆಮದ್ದುಗಳ ಬಳಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುವುದು. ಅಜ್ವೈನ್‌ ಗಾಯಕ್ಕೆ ಮನೆಮದ್ದಾಗಿ ಕೆಲಸ ಮಾಡುವುದು ಚಿಕ್ಕ ಗಾಯವಾಗಿದ್ದರೆ, ತ್ವಚೆ ಸೋಂಕು ಉಂಟಾಗಿದ್ದರೆ ಓಮದ ಕಾಳಿನ ಎಣ್ಣೆಯನ್ನು ಆ ಭಾಗಕ್ಕೆ ಹಚ್ಚಿ ಸ್ವಚ್ಛ ಮಾಡಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.

ಅಷ್ಟೇ ಅಲ್ಲದೆ ಓಮದ ಕಾಳನ್ನು ಹಲ್ಲು ನೋವು ಉಂಟಾದಾಗ ಜಗಿದರೆ ನೋವು ಕಡಿಮೆಯಾಗುವುದು. ನೀರಿಗೆ 1 ಚಮಚ ಓಮದ ಕಾಳನ್ನು ಹಾಗೂ ಉಪ್ಪು ಹಾಕಿ ಕುದಿಸಿ, ಆ ಬಿಸಿ ನೀರಿನಿಂದ ಬಾಯಿ ಮುಕ್ಕಿಸಿದರೆ ಹಲ್ಲು ನೋವು ಕಡಿಮೆಯಾಗುವುದು.

ಮನೆಯಲ್ಲಿ ಹೆಚ್ಚಾಗಿ ಸೊಳ್ಳೆ ಬರದಂತೆ ತಡೆಗಟ್ಟಲು ಸಾಸಿವೆ ಎಣ್ಣೆಗೆ ಓಮದ ಕಾಳನ್ನು ಹಾಕಿ ಮಿಕ್ಸ್ ಮಾಡಿ ಒಂದು ಬೌಲ್‌ನಲ್ಲಿ ಹಾಕಿ ಮನೆಯ ಮೂಲೆ-ಮೂಲೆಯಲ್ಲಿಟ್ಟರೆ ಸೊಳ್ಳೆ ಬರುವುದಿಲ್ಲ.

ಅಕಾಲಿಕ ನೆರೆಕೂದಲು ತಡೆಗಟ್ಟಲು ಅಜ್ವೈನ್‌ ಸಹಕಾರಿ, ಒಂದು ಕಪ್ ಬಿಸಿ ನೀರಿಗೆ 4-5 ಎಸಳು ಕರಿಬೇವು, ಒಣ ದ್ರಾಕ್ಷಿ, ಚಿಟಿಕೆಯಷ್ಟು ಸಕ್ಕರೆ, ಅಜ್ವೈನ್ ಹಾಕಿ ಆ ನೀರನ್ನು 5 ನಿಮಿಷದ ಬಳಿಕ ಕುಡಿಯಬೇಕು. ಈ ರೀತಿ ಪ್ರತಿದಿನ ಕುಡಿದರೆ ಅಕಾಲಿಕ ನೆರೆ ಕೂದಲು ಮಾಯವಾಗಿ ಪುನಃ ಕಪ್ಪು ಕೂದಲಿನ ಸೌಂದರ್ಯ ಪಡೆಯಬಹುದು.

ಒಂದು ಚಮಚ ಓಮದ ಕಾಳನ್ನು ಅನ್ನು ನೀರಿಗೆ ಹಾಕಿ ಕುದಿಸಿ ಕುಡಿದರೆ ಕೆಮ್ಮು, ಜ್ವರ ಕಡಿಮೆಯಾಗುವುದು. ಹಾಗೂ ಸ್ವಲ್ಪ ಓಮದ ಕಾಳನ್ನು ದಿನನಿತ್ಯ ತಿಂದರೆ ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿರುವುದು.

ಮಂಡಿ ನೋವಿಗೆ ಮನೆಮದ್ದು: ಓಮದ ಕಾಳನ್ನು ಅನ್ನು ಪೇಸ್ಟ್‌ ಮಾಡಿ ನೋವಿರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು. ಹಾಗೂ ದಿನನಿತ್ಯ ಡಯಟ್‌ನಲ್ಲಿ ಓಮದ ಕಾಳನ್ನು ಸೇರಿಸಿದರೆ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು.

Leave a Reply

Your email address will not be published. Required fields are marked *

error: Content is protected !!