ಅಮೆರಿಕ: ಗುಂಡಿಕ್ಕಿ ಶಿರ್ವ ಮೂಲದ ಯುವಕನ ಹತ್ಯೆ

ಉಡುಪಿ: ಕ್ಯಾಲಿಫೊರ್ನಿಯಾದ ಸ್ಯಾನ್​ ಬರ್ನಾರ್ಡಿಡಿನೋ ಕಾಲೇಜಿನಲ್ಲಿ ಕಂಪ್ಯೂಟರ್​ ಸೈನ್ಸ್​ ಅಂತಿಮ ಸೆಮಿಸ್ಟರ್​ ಓದುತ್ತಿದ್ದ ಶಿರ್ವ ಮೂಲದ ಯುವಕನ ಹತ್ಯೆ ನಡೆದಿದೆ.

ಕಾಪು ಸಮೀಪದ ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್​ (25) ಮೃತ ವಿದ್ಯಾರ್ಥಿ. ಅಮೆರಿಕದಲ್ಲಿ ಓದುತ್ತಿದ್ದ ಈತನನ್ನು ಭಾರತೀಯ ಕಾಲಮಾನ ಮುಂಜಾನೆ 2.30ರವೇಳೆಗೆ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಯೋರ್ವ ಅಭಿಷೇಕ್​ ಹಣೆಗೆ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಅಭಿಷೇಕ್​ ಇಂಜಿನಿಯರಿಂಗ್​ ಪದವಿ ಬಳಿಕ ಸ್ನಾತಕೋತ್ತರ ಅಧ್ಯಯನಕ್ಕೆ 2018ರಲ್ಲಿ ಅಮೆರಿಕಕ್ಕೆ ತೆರಳಿದ್ದರು.
ಅವರು ಓದುತ್ತಿದ್ದ ಕಾಲೇಜಿನಲ್ಲಿ ವಾರದಲ್ಲಿ ಎರಡು ದಿನ ತರಗತಿ ಇದ್ದರೆ, ಉಳಿದ ನಾಲ್ಕ ದಿನ ಮನೆಯಲ್ಲೇ ಅಧ್ಯಯನ ಮಾಡುವ ಪದ್ಧತಿ ಇತ್ತು. ಈತ ವಾರಾಂತ್ಯದಲ್ಲಿ ಹೋಟೆಲ್​ವೊಂದರಲ್ಲಿ ರಿಸಪ್ಷನಿಷ್ಟ್​ ಆಗಿ ಕೆಲಸ ಮಾಡುತ್ತಿದ್ದ.

ಈ ಹೊಟೆಲ್​ನಲ್ಲಿ ಲಾಡ್ಜಿಂಗ್​ ವ್ಯವಸ್ಥೆ ಇತ್ತು. ಅಲ್ಲಿಗೆ ಆಗಮಿಸಿದ್ದ ಗ್ರಾಹಕರೋರ್ವರು ಸಮಯ ಮುಗಿದರೂ ಉಳಿದುಕೊಂಡಿದ್ದರು. ಅವರ ಬಳಿ ಹೋಗಿ ರೂಂ ಖಾಲಿ ಮಾಡಿ ಎಂದು ಅಭಿಷೇಕ್​ ಹೇಳಿದ್ದ. ಅದಾದ ಬಳಿಕ ಅಮೆರಿಕ ಕಾಲಮಾನದಂತೆ ನ.28ರ ಮಧ್ಯಾಹ್ನ 12.30ಕ್ಕೆ ಅಭಿಷೇಕ್​ ಮತ್ತು ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಸಿಟ್ಟಿಗೆದ್ದ ಆ ಗ್ರಾಹಕ ಅಭಿಷೇಕ್​ ಹಣೆಗೆ ಗುಂಡು ಹೊಡೆದಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಮತ್ತು ಸ್ಟೇಟ್ ಹೆಲ್ತ್ ಆಫೀಸರ್‌ಗಳ ತಂಡ ತನಿಖೆ ಕೈಗೊಂಡಿದೆ.
ಅಭಿಷೇಕ್ ತಂದೆ ಸುದೇಶ್ ಅವರು ಮೈಸೂರಿನಲ್ಲಿ ಯೋಗ ಶಾಲೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!