ಉಪ್ಪಾ-ಮಲಬಾರ್ ಗೋಲ್ಡ್ ಪುರಸ್ಕಾರ: ಜಯಕರ ಸುವರ್ಣ ಆಯ್ಕೆ

ವಿಶ್ವಛಾಯಾಗ್ರಹಣ ದಿನಾಚರಣೆ ಅಂಗವಾಗಿ ಉಡುಪಿ ಪ್ರೆಸ್ ಫೋಟೋಗ್ರಾಪರ್‍ಸ್ ಅಸೋಸಿಯೇಶನ್ಸ್ ಕೊಡಮಾಡಲ್ಪಡುವ ಉಪ್ಪಾ-ಮಲಬಾರ್ ಗೋಲ್ಡ್ ಪುರಸ್ಕಾರಕ್ಕೆ ಆದಿಉಡುಪಿಯ ಸುವರ್ಣ ಸ್ಟುಡಿಯೋ ಮಾಲಕ ಜಯಕರ ಸುವರ್ಣ ಆಯ್ಕೆಯಾಗಿರುತ್ತಾರೆ.


ಸುವರ್ಣ ಸುಮಾರು 40 ವರ್ಷಗಳಿಂದ ಛಾಯಾಗ್ರಹಣ ಹಾಗು ವೀಡೀಯೋ ಚಿತ್ರೀಕರಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಪ್ರಾರಂಭದಲ್ಲಿ ಕಪ್ಪು-ಬಿಳುಪು ಛಾಯಾಗ್ರಹಣದಲ್ಲಿ ತನ್ನನ್ನು ತೊಡಗಿಸಿಕೊಂಡು ಈಗಿನ ವರ್ಣ ಚಿತ್ರಗಳ ಯುಗದಲ್ಲೂ ಸೈ ಎನಿಸಿಕೊಂಡವರು. ಗಣ್ಯಾತಿಗಣ್ಯರು ಉಡುಪಿಗೆ ಬಂದಾಗ ಅಧೀಕೃತ ಛಾಯಾಗ್ರಾಹಕರಾಗಿ ತನ್ನ ಕ್ಯಾಮಾರದಲ್ಲಿ ಅವರನ್ನು ಸೆರೆಹಿಡಿದಿರುವ ಇವರು ನಾಡಿನ ವಿವಿದ ಪತ್ರಿಕೆಗಳಿಗೂ ಛಾಯಾಚಿತ್ರ ಪೂರ್‍ಯೆಸುತ್ತಿದ್ದರು. ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಯಕರ ಸುವರ್ಣರವರು ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಶಿಯೇಶನ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುವರು.


ಪ್ರಸ್ತುತ ದೂರದರ್ಶನ ವಾಹಿನಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಸಂಖ್ಯಾತ ಯುವ ಛಾಯಾಚಿತ್ರಗಾರರಿಗೆ ಛಾಯಾಗ್ರಹಣ ಕ್ಷೇತ್ರಕ್ಕೆ ಕಾಲಿರಿಸಿಲು ಪ್ರೇರಣೆಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಅಭಿನಂದಿಸಿದೆ. ಪತ್ನಿ ಸಂಧ್ಯಾ ಹಾಗು ಮೂರು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.
ಜಯಕರ ಸುವರ್ಣ ಇವರ ಸೇವಾ ಹಿರಿಮೆಯನ್ನು ಮನಗಂಡು ಉಡುಪಿ ಪ್ರೆಸ್ ಪೋಟೋಗ್ರಾಪರ್‍ಸ್ ಅಸೋಸಿಯೇಶನ್ಸ್ ಹಾಗು ಮಲಬಾರ್ ಗೋಲ್ಡ್ ಜಂಟಿಯಾಗಿ ಶುಕ್ರವಾರದಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಸಂದರ್ಭ ಮಲಬಾರ್ ಗೋಲ್ಡ್ ಶೊರೂಂ ನಲ್ಲಿ “ಛಾಯಾ ಸ್ಪೂರ್ತಿ” ಬಿರುದನ್ನಿತ್ತು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉಪ್ಪಾ ಸಂಚಾಲಕ ಜನಾರ್ದನ್ ಕೊಡವೂರ್ ಹಾಗು ಮಲಬಾರ್ ಗೋಲ್ಡ್‌ನ ಹಫೀಜ್ ರಹಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!