ಉಡುಪಿ: ಜಿಲ್ಲೆಯಾದ್ಯಂತ ನ.16 ರಿಂದ 23 ರವರೆಗೆ ಅರಿವಿನ ಪಯಣ ಲಿಂಗಸೂಕ್ಷ್ಮತಾ ಕಾರ್ಯಾಗಾರ ಸಪ್ತಾಹ

ಉಡುಪಿ (ಉಡುಪಿ ಟೈಮ್ಸ್ ವರದಿ ): ಜಿಲ್ಲೆಯಾದ್ಯಂತ ‘ಆರಿವಿನ ಪಯಣ’ ಎಂಬ ಲಿಂಗಸೂಕ್ಷ್ಮತಾ ಅಭಿಯಾನದ ಸಪ್ತಾಹವನ್ನು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಇದೇ ನವೆಂಬರ್ 16 ರಿಂದ 23ರ ವರೆಗೆ ನಡೆಯಲಿದೆ. ಹೀಗೆ ‘ಅರಿವಿನ ಪಯಣ ಲಿಂಗಸೂಕ್ಷ್ಮತಾ ಕಾರ್ಯಾಗಾರ ಸಪ್ತಾಹ’ವನ್ನು ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಸದಸ್ಯೆ ವಾಣಿ ಪೆರಿಯೋಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಒಕ್ಕೂಟವು ‘ಆರಿವಿನ ಪಯಣ’ ಅಭಿಯಾನವನ್ನು ಕಳೆದ ಏಳು ವರ್ಷಗಳಿಂದ ನಡೆಸುತ್ತಿದ್ದು ಇದು ಲಿಂಗ ಸಮಾನತೆಯನ್ನು ಸಾರುವ ಅಭಿಯಾನ, ಸಮಾಜದಲ್ಲಿರುವ ತಾರತಮ್ಯದ ನೆಲೆಗಳು, ಸ್ವರೂಪ, ತಾರತಮ್ಯಗಳನ್ನು ತಡೆಗಟ್ಟಬಹುದಾದ ಕ್ರಮಗಳ ಬಗ್ಗೆ ಯುವಜನರೊಂದಿಗೆ ಸಂವಾದ ಮಾಡುವುದು ಈ ಕಾರಕ್ರಮದ ಉದ್ದೇಶ, ಇದಕ್ಕಾಗಿ ಹಾಡು, ಕಿರುನಾಟಕ, ಕತೆ ಮತ್ತು ಸಂವಾದಗಳನ್ನು ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಈಗಾಗಲೇ ಕಳೆದ ಜುಲೈ ತಿಂಗಳಿನಿಂದ ಉಡುಪಿಯಲ್ಲಿ ಸಿದ್ಧತಾ ಸಭೆ, ತರಬೇತಿ ಕಾರ್ಯಾಗಾರ ನಡೆಸಿ ತಂಡಗಳನ್ನು ಸಿದ್ಧಪಡಿಸಲಾಗಿದೆ. ‘ಅರಿವಿನ ಪಯಣ’ ಸಪ್ತಾಹದ ಕಾರ್ಯಕ್ರಮವು ಉಡುಪಿ ಜಿಲ್ಲೆಯ ಏಳು ತಾಲೂಕುಗಳ 21 ಶಾಲೆ-ಕಾಲೇಜು, ಮಹಿಳಾ ವೇದಿಕೆಗಳಲ್ಲಿ ಇದೇ ನವೆಂಬರ್ 16 ರಿಂದ 23ರ ವರೆಗೆ ನಡೆಯಲಿದ್ದು ಸುಮಾರು 10 ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದು ಇದೀಗ 11 ನೇ ಜಿಲ್ಲೆಯಾಗಿ ಉಡುಪಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು .ಹೀಗೆ ‘ಅರಿವಿನ ಪಯಣ ಲಿಂಗಸೂಕ್ಷ್ಮತಾ ಕಾರ್ಯಾಗಾರ ಸಪ್ತಾಹ’ವನ್ನು ಶಾಲಾಕಾಲೇಜುಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಹಾಗು ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆಗಳನ್ನು ತೊಟ್ಟು ಮಹಿಳೆಯರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂಬುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದ್ಯಸರಾದ ಫಣಿರಾಜ್ ,ಡಾ ಸಭಿಯ ಭೂಮಿ ಗೌಡ , ಜಾನಕೀ ಬ್ರಹ್ಮಾವರ ,ಸುನಿತಾ ಶೆಟ್ಟಿ ,ರೇಖಾಂಶ ಶಿವಮೊಗ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!