ನೀಲಾವರ ಗೋ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
ಉಡುಪಿ(ಉಡುಪಿ ಟೈಮ್ಸ್ ವರದಿ) – ಗೋವಿನ ಪೋಷಣೆ ರಾಷ್ಟ್ರೀಯ ಆದ್ಯತೆಯಾಗಲಿ ಎಂಬುದಾಗಿ ಶ್ರೀ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದರು. ನೀಲಾವರ ಗೋಶಾಲೆಯಲ್ಲಿರುವ ಶಾಖಾಮಠದಲ್ಲಿ ಇದೆ ಮೊದಲ ಬಾರಿಗೆ ಗೋಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶನಿವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡುತ್ತಾ
ಪ್ರತಿಯೊಂದು ಗೋವೂ ಹುಟ್ಟಿನಿಂದ ಕೊನೆಯವರೆಗೂ ಪರಹಿತಕ್ಕಾಗಿ ಲೋಕದ ಒಳಿತಿಗಾಗಿಯೇ ಜೀವಿಸುತ್ತವೆ . ಆದ್ದರಿಂದ ರಾಷ್ಟ್ಟದ ಸುಭಿಕ್ಷೆ ಸಮೃದ್ಧಿಯನ್ನು ಬಯಸುವ ಸರಕಾರ ಹಾಗೂ ಪ್ರತಿಯೊಬ್ಬರೂ ಗೋವಿನ ಪೋಷಣೆಯನ್ನು ರಾಷ್ಟ್ರೀಯ ಕರ್ತವ್ಯ ಎಂದೇ ಪರಿಗಣಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದರು.
ಎಷ್ಟೇ ಕಷ್ಟ ಸವಾಲುಗಳು ಎದುರಾದರೂ ದೇಶದಲ್ಲಿ ಗೋವಿನ ರಕ್ಷಣೆಯ ಕಾರ್ಯದಿಂದ ಯಾರೊಬ್ಬರೂ ಹಿಂದೆ ಸರಿಯಲೇ ಬಾರದು . ಒಂದೊಮ್ಮೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದರಿಂದ ದೇಶಕ್ಕೇ ವಿಪತ್ತು ನಿಶ್ಚಿತ ಎಂದು ತಿಳಿಸಿದರು .
ಗೋಶಾಲೆಯ ವ್ಯವಸ್ಥಾಪಕ ನರಸಿಂಹ ಭಟ್ , ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣ ಭಟ್ , ವಿಷ್ಣುಮೂರ್ತಿ ಆಚಾರ್ಯ , ಸಿಬಂದಿ ವರ್ಗ ಮತ್ತು ಶಾಸ್ತ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .