ಉದ್ಯಾವರ : ಸರಕಾರಿ ಪ್ರೌಢ ಶಾಲೆಯಲ್ಲಿ ‘ಗುರುವಂದನೆ’

ಉದ್ಯಾವರ ನ.4 (ಉಡುಪಿ ಟೈಮ್ಸ್ ವರದಿ) : ಸರಕಾರಿ ಪ್ರೌಢ ಶಾಲೆ ಉದ್ಯಾವರದ 1992-93ರ ಎಸ್‍ಎಸ್‍ಎಲ್‍ಸಿ ಹಳೆ ವಿದ್ಯಾರ್ಥಿಗಳಿಂದ ವಿದ್ಯೆ ಕಲಿಸಿದ ಗುರು ವೃಂದದವರಿಗೆ ಹಾಗೂ ಕಚೇರಿ ಸಿಬ್ಬಂದಿ ವೃಂದದವರಿಗೆ ಗುರು ವಂದನೆ ಕಾರ್ಯಕ್ರಮ ರಾಜ್ಯೋತ್ಸವ ದಿನದಂದು ಉದ್ಯಾವರ ಲಯನ್ಸ್ ಭವನದಲ್ಲಿ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಬಲ ತಿಂಗಳಾಯ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಕನ್ನಡ ರಾಜ್ಯೋತ್ಸವದ ಧ್ವಜ ಅನಾವರಣಗೊಳಿಸಿ ನಾಡಗೀತೆ ನುಡಿಸಲಾಯಿತು. ಹಾಗೂ ಅಗಲಿದ ಗುರುಗಳಿಗೆ ಹಾಗೂ ಸಹಪಾಠಿಗಳಿಗೆ ನುಡಿನಮನ ಸಲ್ಲಿಸಲಾಯಿತು.

ಗುರುವಂದನೆಯ ಅಭಿನಂದನೆಗಳನ್ನು ಕ್ರಮವಾಗಿ ಮುಖ್ಯೋಪಾಧ್ಯಾಯರು ಮತ್ತು ಇಂಗ್ಲೀಷ್ ಅಧ್ಯಾಪಕರಾದ ಮಹಾಬಲ ತಿಂಗಳಾಯ, ಗಣಿತ ಶಿಕ್ಷಕರಾದ ವಿಠ್ಠಲ ಮಾಸ್ಟರ್, ದೈಹಿಕ ಶಿಕ್ಷಕರಾದ ಉಮಾನಾಥ ಶೆಟ್ಟಿ, ವಿಜ್ಞಾನ ಶಿಕ್ಷಕರಾದ ಐ ಜೆ ವಿಲಿಯಮ್, ಸಮಾಜ ವಿಜ್ಞಾನ ಶಿಕ್ಷಕರಾದ ಮರ್ಜೋರೀ ಪಯಾಜ್, ಕನ್ಮಡ ಶಿಕ್ಷಕರಾದ ಪಿ ಆರ್ ಹನಸಿ, ಸಮಾಜ ವಿಜ್ಜಾನ ಶಿಕ್ಷಕರಾದ ಎಂ ಎನ್ ಶೇರಿಗಾರ್ ಟೈಲರಿಂಗ್ ವಿಭಾಗದ
ಶರಣಪ್ಪ ಹಾಗೂ ಕಚೇರಿ ಸಿಬ್ಬಂದಿ ವೃಂದದವರಾದ ಕೆ.ಮಾಧವ ಶೇರಿಗಾರ್, ಗೋಪಾಲಕೃಷ್ಣ ನಾಯಕ್, ಅಂಗಾರ ಪೂಜಾರಿ ಗೋಪಾಲ ದೇವಾಡಿಗ ಅವರು ಸ್ವೀಕರಿಸಿದರು. ಬಳಿಕ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವರು.

error: Content is protected !!