ಬಹ್ರೈನ್: ಆಟದಲ್ಲಿ ಸೋತರು, ಸೌಹಾರ್ದದಲ್ಲಿ ಕ್ರೀಡಾಭಿಮಾನಗಳ ಮನಗೆದ್ದ ಪುಟ್ಬಾಲ್ ಆಟಗಾರರು

ಬಹ್ರೈನ್ ಮಾ.28 : ಭಾರತೀಯ ಫುಟ್ಬಾಲ್ ತಂಡ ಸೌಹಾರ್ದ ಪಂದ್ಯದಲ್ಲಿ ಬೆಲಾರುಸ್ ವಿರುದ್ಧ 0-3 ಅಂತರದ ಸೋಲನುಭವಿಸಿದ್ದರೂ, ಇದೀಗ ತಂಡದ ಮೂರು ಭಾರತೀಯ ಆಟಗಾರರು ಒಟ್ಟಿಗೆ ಪ್ರಾರ್ಥಿಸುವ ಚಿತ್ರವು ಕ್ರೀಡಾಭಿಮಾನಿಗಳ ಹೃದಯವನ್ನು ಗೆದ್ದಿದೆ.

ಮಾರ್ಚ್ 26 ರ ಪಂದ್ಯಾಟಗಳಿಗೆ ಸಂಬಂಧಿಸಿದ ಇತರ ಕೆಲವು ಚಿತ್ರಗಳೊಂದಿಗೆ ಬೆಲಾರುಸ್ ವಿರುದ್ಧದ ಪಂದ್ಯದ ಮೊದಲು ಆಟಗಾರರು ಒಟ್ಟಿಗೆ ನಿಂತು ಪ್ರಾರ್ಥಿಸುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಭಾರತೀಯ ಫುಟ್ಬಾಲ್ ತಂಡದ ಅಧಿಕೃತ ಖಾತೆಯಿಂದ ಈ ಫೋಟೋ ಹಂಚಿಕೊಳ್ಳಲಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋ ಬಾರೀ ವೈರಲ್ ಆಗಿದೆ. ವಿಭಿನ್ನ ನಂಬಿಕೆಯ ಮೂವರು ಭಾರತೀಯ ತಂಡದ ಆಟಗಾರರು ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಪ್ರಾರ್ಥಿಸುವ ಚಿತ್ರವು ‘ನಿಜವಾದ ಭಾರತೀಯತೆ’ಯನ್ನು ಜಗತ್ತಿಗೆ ಅನಾವರಣ ಮಾಡಿದೆ ಎಂದು ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಈ ನಿರ್ದಿಷ್ಟ ಚಿತ್ರವು ನೆಟ್ಟಿಗರ ಗಮನ ಸೆಳೆದಿದ್ದು, ಭಾರತೀಯ ಫುಟ್‍ಬಾಲ್ ತಂಡವು ಎಲ್ಲಾ ನಂಬಿಕೆಗಳನ್ನು ಗೌರವಿಸುವ ಭಾರತದ ಮೂಲಗುಣವನ್ನು ಪ್ರತಿಬಿಂಬಿಸುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಚಿತ್ರವನ್ನು ಹಂಚಿಕೊಂಡಿರುವ ಡಾ. ಗೌರವ್ ಗಾರ್ಗ್ ಎಂಬವರು, ಇದು ಭಾರತದ ನಿಜವಾದ ಆತ್ಮ. ಭಾರತೀಯ ಫುಟ್ಬಾಲ್ ಆಟಗಾರರು ಪಂದ್ಯಕ್ಕೂ ಮುನ್ನ ತಮ್ಮದೇ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.’ ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಮಹಿಯಾರ್ ಶರ್ಮ ಎಂಬವರು ಟ್ವೀಟ್ ಮಾಡಿ “ಫುಟ್ಬಾಲ್ ಯಾವುದೇ ಧರ್ಮ ಮತ್ತು ಯಾವುದೇ ಜನಾಂಗವನ್ನು ಮೀರಿದೆ ಅದಕ್ಕಾಗಿಯೇ ಇದು ಸುಂದರವಾದ ಆಟವಾಗಿದೆ. ಇದು ಭಾರತದ ಸೌಂದರ್ಯ. ನೀವು ಇದನ್ನು ಜಗತ್ತಿನಲ್ಲಿ ಎಲ್ಲಿಯೂ ಹುಡುಕಲು ಸಾಧ್ಯವಿಲ್ಲ. ಆದರೆ ದುಃಖಕರವೆಂದರೆ ಕೆಲವು ರಾಜಕೀಯ ಪಕ್ಷಗಳು ಇದನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!