ಕನ್ನಡ ನಿರ್ಲಕ್ಷ್ಯ ಮಾಡಿಲ್ಲ: ಶ್ರೀಕೃಷ್ಣ ಮಠ ಸ್ಪಷ್ಟನೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿಯ ಶ್ರೀ ಕೃಷ್ಣ ಮಠದ ಮುಖದ್ವಾರದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಠವು ಸ್ಷಷ್ಟೀಕರಣ ನೀಡಿದೆ.

ಶ್ರೀ ಕೃಷ್ಣ ಮಠದ ಮುಖ್ಯದ್ವಾರದ ಬಳಿಯ ನಾಮ ಫಲಕದಲ್ಲಿ ಕನ್ನಡದಲ್ಲಿ ಇದ್ದಂತಹ ನಾಮ ಫಲಕವನ್ನು ತೆಗೆದು ಹಾಕಿದ ವಿಚಾರಕ್ಕೆ ಸಂಬಂಧಿಸಿ ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪ ವ್ಯಕ್ತ ಪಡಿಸಿದ್ದು ಅಲ್ಲದೆ, ಈ ಕ್ರಮವನ್ನು ಖಂಡಿಸುವುದಾಗಿಯೂ ಹೇಳಿತ್ತು.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದು,
ಮಠವನ್ನು ಪುನಶ್ಚೇತನ ಗೊಳಿಸುವ ಸಂದರ್ಭದಲ್ಲಿ ಶ್ರೀಗಳ ಅಭಿಮತದಂತೆ ಮುಖ್ಯ ದ್ವಾರದಲಿದ್ದ ಪ್ಲಾಸ್ಟಿಕ್ ಬೋರ್ಡ್ನ

ಬದಲು ಮರದ ಫಲಕವನ್ನು ಹಾಕುವ ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಮಠದ ಮುಖದ್ವಾರದಲ್ಲಿ ಮೊದಲು ಕನ್ನಡ ಮತ್ತು ನಂತರ ಸಂಸ್ಕ್ರತ ಹಾಗೂ ತುಳು ಲಿಪಿಯ ಫಲಕ ಹಾಕುವ ಯೋಜನೆ ಶ್ರೀಗಳದ್ದಾಗಿತ್ತು.


ಆದರೆ, ನಾಮ ಫಲಕವನ್ನು ತಯಾರು ಮಾಡುವ ವೇಳೆ ಲಕ್ಷದೀಪ ಬಂದ ಕಾರಣ ಫಲಕ ತಯಾರಿಕಾ ಪ್ರಕ್ರಿಯೆ ನಿಧಾನವಾಗಿದೆ. ಸದ್ಯ ಕನ್ನಡ ಲಿಪಿಯ ನಾಮಫಲಕ ತಯಾರಿಕಾ ಪ್ರಕ್ರಿಯೆ ನಡೆಯುತ್ತಿದ್ದು, ಸಂಸ್ಕತ ಹಾಗೂ ತುಳುವಿನ ಬೋರ್ಡ್ ನ್ನು ಅಳವಡಿಸಲಾಗಿದೆ.
ಮಠದಲ್ಲಿರುವ ಗ್ರಂಥಿ ಲಿಪಿ ತುಳು ಭಾಷೆಯಲ್ಲಿ ಇರುವ ಕಾರಣ ತುಳುವಿಗೂ ಮಾನ್ಯತೆ ಕೊಡಬೇಕು ಎನ್ನುವ ಉದ್ದೇಶದಿಂದ ಈ ಫಲಕವನ್ನು ಅಳವಡಿಸಲಾಗಿದೆ.

ಕನ್ನಡ ಲಿಪಿಯ ಫಲಕದ ತಯಾರಿಕಾ ಪ್ರಕ್ರಿಯೆ ಮುಗಿದ ಬಳಿಕ ಮಠದ ಮುಖದ್ವಾರದಲ್ಲಿ ಕನ್ನಡದ ನಾಮ ಫಲಕ ಪ್ರಾರಂಭದಲ್ಲಿರಲಿದ್ದು, ನಂತರ ಸಂಸ್ಕತ ಹಾಗೂ ತುಳುವಿನ ಭಾಷೆಯ ಲಿಪಿ ಇರಲಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!