ಬಿಹಾರ: ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಕುಂಟುಂಬಸ್ಥರು ಸೇರಿ 6 ಮಂದಿ ಸಾವು

ಬಿಹಾರ ನ.17 : ಬಿಹಾರದ ಲಖಿಸರಾಯ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್​ ನಟ ದಿ. ಸುಶಾಂತ್​ ಸಿಂಗ್​ ರಜಪೂತ್​ ಅವರ 5 ಮಂದಿ ಸಂಬಂಧಿಕರು ಹಾಗೂ ಕಾರು ಚಾಲಕ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಸುಶಾಂತ್​ ಸಿಂಗ್​ ಕುಟುಂಬದ ಬಾಬಿ ದೇವಿ, ಅನಿತಾ ದೇವಿ, ಲಾಲ್​ಜಿತ್​ ಸಿಂಗ್​, ಅಮಿತ್​ ಶೇಖರ್​, ರಾಮಚಂದ್ರ ಸಿಂಗ್​ ಹಾಗೂ ಚಾಲಕ ಪ್ರೀತಂ ಮೃತಪಟ್ಟವರು.

ದುರ್ಘಟನೆಯಲ್ಲಿ 4 ಮಂದಿ ತೀವ್ರ ಗಾಯಗೊಂಡಿದ್ದು, ಅವರನ್ನು ಪಟನಾ ಮತ್ತು ಲಖಿಸರೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಬಲ್ಮುಕುಂದ್​ ಸಿಂಗ್, ದಿಲ್​ಖುಷ್​ಸಿಂಗ್​ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಸುಶಾಂತ್​ ಸಿಂಗ್​ ರಜಪೂತ್​ ಅವರ ಭಾವ ಒ.ಪಿ. ಸಿಂಗ್​ ಅವರ ಸಹೋದರಿ ನಿಧನರಾಗಿದ್ದರು. ಅವರ ಅಂತಿಮ ಸಂಸ್ಕಾರವನ್ನು ಮುಗಿಸಿದ ಬಳಿಕ ಕುಟುಂಬದವರೆಲ್ಲ ಪಾಟ್ನಾದಿಂದ ಹಿಂದಿರುಗುತ್ತಿದ್ದ ವೇಳೆ, ಬಿಹಾರದ ಲಖಿಸರಾಯ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 333ರಲ್ಲಿ ಈ ಅಪಘಾತ ಸಂಭವಿಸಿದೆ.

10 ಮಂದಿ ಪ್ರಯಾಣಿಸಿದ್ದ ಕಾರು ಮತ್ತು ಟ್ರಕ್​​ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್​ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

1 thought on “ಬಿಹಾರ: ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಕುಂಟುಂಬಸ್ಥರು ಸೇರಿ 6 ಮಂದಿ ಸಾವು

Leave a Reply

Your email address will not be published. Required fields are marked *

error: Content is protected !!