ಕನ್ನಡ ನಾಡು ನುಡಿಯ ಜೊತೆ ಸಮಾಜಮುಖಿ ಚಿಂತನೆ ಪ್ರಶಂನೀಯ- ಜಿ ಸತೀಶ್ ಹೆಗ್ಡೆ
ಕೋಟ(ಉಡುಪಿ ಟೈಮ್ಸ್ ವರದಿ):ನಾಡು ಕಟ್ಟುವ ಕಾರ್ಯದಲ್ಲಿ ಸಂಘಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಕೋಟ ಅಮೃತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಿ.ಸತೀಶ್ ಹೆಗ್ಡೆ ಹೇಳಿದ್ದಾರೆ.
ಅವರು ಕೋಟದ ಪಂಚವರ್ಣ ಯುವಕ ಮಂಡಲ ವತಿಯಿಂದ 24 ನೇ ವರ್ಷದ ಸದ್ಭಾವನಾ ಶೀರ್ಷಿಕೆಯಡಿ ನಡೆಯುತ್ತಿರುವ 66 ನೇ ಕನ್ನಡ ರಾಜ್ಯೋತ್ಸವ ಪೂರ್ವಾಹ್ನದ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ನಾಡು ನುಡಿಯ ಜೊತೆ ಸಮಾಜಮುಖಿ ಚಿಂತನೆ ಪ್ರಶಂಸನೀಯ,ಇದರ ಜೊತೆ ಭಾಷಾಭಿಮಾನ ಬೀಜ ಬಿತ್ತುವ ಕೆಲಸ ನಡೆಯಲಿ.ಕನ್ನಡ ತಮ್ಮ ಜೀವನಾಡಿಯೊಳಗೆ ಬೆರೆಯುವಂತೆ ಮಾಡಿಕೊಳ್ಳಬೇಕು .
ಪೋಷಕರು ಇಂಗ್ಲಿಷ್ ವ್ಯಾಮೂಹ ಬಿಟ್ಟು ಕನ್ನಡ ಮಾಧ್ಯಮ ಉಳಿಯಲು ಶ್ರಮಿಸಬೇಕಾಗಿದೆ.ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಕ್ಷೀಣಿಸುತ್ತಿರ ಸನ್ನಿವೇಶದಲ್ಲಿ ಸರಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕೆಲಸ ನಿರ್ವಹಿಸಬೇಕಿದೆ.ಈ ನಿಟ್ಟಿನಲ್ಲಿ ಪಂಚವರ್ಣ ಯುವಕ ಮಂಡಲ ರಾಜ್ಯೋತ್ಸವ ಕಾರ್ಯಕ್ರಮದ ಮೂಲಕ ಈ ಗ್ರಾಮೀಣ ಭಾಗದಲ್ಲಿ ಹೊಸ ಅಧ್ಯಾಯ ಸೃಷ್ಠಿಸಿದೆ ಎಂದು ಅಭಿಪ್ರಾಯಪಟ್ಟರು.
ಧ್ವಜಾರೋಹಣಗೈದು ಮಾತನಾಡಿದ ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ ಬಿ.ಪಿ ಪಂಚವರ್ಣ ಯುವಕ ಮಂಡಲ ಭಾಷಾಭಿಮಾನದ ಪರಿಕಲ್ಪನೆ, ಪರಿಸರ ಸ್ನೇಹಿಯಾಗಿ ಗುರುತಿಸಿಕೊಂಡಿವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿ ಮನೆಮನಗಳಲ್ಲಿ ಕನ್ನಡದ ತೇರು ಎಳೆಯುವಂತ್ತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರ ಆಚಾರ್ಯ,ಪರಿಸರವಾದಿ ಗಿರೀಶ್ ನಾಯಕ್,ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಪಂಚವರ್ಣ ಯುವಕಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು.
ಸಂಘದ ಗೌರವ ಸಲಹೆಗಾರ ಉಮೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.ಸಂಘದ ಸಂಚಾಲಕ ಅಜಿತ್ ಆಚಾರ್ಯ ವಂದಿಸಿದರು.