ಕೋಸ್ಟಲ್ ವುಡ್ ಚಿತ್ರ ಪಿಂಗಾರಕ್ಕೆ ಅತ್ತ್ಯುತ್ತಮ ತುಳು ಚಿತ್ರ ಪ್ರಶಸ್ತಿ

ದೆಹಲಿ ಅ.25 : 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೋಸ್ಟಲ್‍ವುಡ್‍ನ ಪಿಂಗಾರ ಚಿತ್ರಕ್ಕೆ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಲಭಿಸಿದೆ.

 ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದರು, ಈ ಸಮಾರಂಭದಲ್ಲಿ ತಮಿಳು ನಟ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮರಕ್ಕಾರ್ (ಲೈಯನ್ ಆಫ್ ದಿ ಅರೇಬಿಯನ್ ಸಿ) ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಕನ್ನಡದ ಅಕ್ಷಿ, ತೆಲುಗಿನ ಜೆರ್ಸಿ, ತಮಿಳಿನ ಅಸುರನ್ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಹಿಂದಿಯ ಚಿಚೋರೆ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದರೊಂದಿಗೆ  ಭೋಂಸ್ಲೆಗಾಗಿ ಮನೋಜ್ ಬಾಜಪೇಯಿ ಮತ್ತು ಅಸುರನ್ ಗಾಗಿ ಧನುಷ್ ಅವರಿಗೆ ಮತ್ಯುತ್ತಮ ನಟ,  ಪಂಗಾ ಮತ್ತು ಮಣಿಕರ್ಣಿಕಾ( ದಿ ಕ್ವೀನ್ ಆಫ್ ಜಾನ್ಸಿ) ಚಿತ್ರಕ್ಕೆ ಕಂಗನಾ ರಣಾವತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ, ತಾಷ್ಕೆಂಟ್ ಫೈಲ್ಸ್ ಚಿತ್ರಕ್ಕಾಗಿ ಪಲ್ಲವಿ ಜೋಶಿ ಅವರಿಗೆ ಅತ್ಯುತ್ತಮ ಪೋಷಕ ನಟಿ, ಸೂಪರ್ ಡಿಲಕ್ಸ್ ಚಿತ್ರದ ಅಭಿನಯಕ್ಕೆ ವಿಜಯ್ ಸೇತುಪತಿ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹಾಗೂ ತೇರಿ ಮಿಟ್ಟಿ ಹಾಡಿನ ಗಾಯನಕ್ಕೆ ಬಿ ಪ್ರಾಕ್ ಅವರಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿರು.

Leave a Reply

Your email address will not be published. Required fields are marked *

error: Content is protected !!