ಕುಂದಾಪುರ: ಕರುನಾಡ ಕಣ್ಮಣಿ ಪ್ರಶಸ್ತಿಗೆ ಬಸ್ರೂರು ಪ್ರದೀಪ್ ಕುಮಾರ್ ಆಯ್ಕೆ
ಕುಂದಾಪುರ(ಉಡುಪಿ ಟೈಮ್ಸ್ ವರದಿ): ಮಾತೃಭೂಮಿ ಸೇವಾ ಟ್ರಸ್ಟ್ (ರಿ) ತುಮಕೂರು ಇವರು ಕೊಡಮಾಡುವ “ರಾಜ್ಯ ಮಟ್ಟದ ಕರುನಾಡ ಕಣ್ಮಣಿ ” ಪ್ರಶಸ್ತಿಗೆ ಬಸ್ರೂರಿನ ಪ್ರದೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಈ ಗೌರವ ಪ್ರಶಸ್ತಿನ್ನು ನೀಡಲಾಗುತ್ತದೆ.
ಪ್ರದೀಪ್ ಕುಮಾರ್ ಹಟ್ಟಿಕುದ್ರು ಗುಜ್ಜಾಡಿ ಮನೆ ಪದ್ಮನಾಭ ಪೂಜಾರಿ ಹಾಗೂ ಉಗ್ರಾಣಿ ಮನೆ ಗಿರಿಜಾ ಪೂಜಾರಿ ದಂಪತಿಯ ದ್ವಿತೀಯ ಪುತ್ರರಾಗಿದ್ದು. ತನ್ನ ಎಳೆ ವಯಸ್ಸಿನಲ್ಲಿಯೇ, ಸಾಂಸ್ಕ್ರತಿಕ, ಶೈಕ್ಷಣೀಕ, ಸಾರ್ವಜನಿಕ ಸೇವಾ ವಲಯ,ಧಾರ್ಮಿಕ ಸೇವೆಯೊಂದಿಗೆ ಸ್ವತಂತ್ರ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇವರ ಶಾಸನ ಶೋಧ ಕಾರ್ಯದ ಒಂದು ಶಾಸನವು ಹಂಪಿ ವಿಶ್ವವಿದ್ಯಾಲಯದ ಶಾಸನ ಪ್ರಸಾರಾಂಗ ವಿಭಾಗದಲ್ಲಿ ವರದಿಯಾಗಿದೆ.ಇದರೊಂದಿಗೆ ಅನೇಕ ವೀರಗಲ್ಲು,ಶಾಸನ ಕಲ್ಲು,ಪುರಾತನ ದೇವರ ವಿಗ್ರಹವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನೇಕ ಸಂಘ ಸಂಸ್ಥೆಯಲ್ಲಿ ಇವರು ನೀಡಿರುವ ಸೇವೆಯನ್ನು ಗುರುತಿಸಿ ಕರುನಾಡ ಕಣ್ಮಣಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ನವೆಂಬರ್ 21 ರಂದು ತುಮಕೂರು ನಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.