ಉಡುಪಿ: ಪ್ರವಾಸ ಪ್ರಿಯರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಡಿಯೋ ಸ್ಪರ್ಧೆ

ಉಡುಪಿ ಸೆ.22(ಉಡುಪಿ ಟೈಮ್ಸ್ ವರದಿ) : ವಿವಿಧ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ವಿಚಾರಾನೇ. ಇದೀಗ ವಿಶ್ವ ಪರಿಸರ ದಿನದ ಅಂಗವಾಗಿ ಇಂತಹದ್ದೇ ಪ್ರವಾಸ ಪ್ರಿಯರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ವಿಡಿಯೋ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.

ಈ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಕ್ಲಿಫರ್ಡ್ ಲೋಬೊ ಅವರು ಮಾಹಿತಿ ನೀಡಿದ್ದು, ಸೆ.27 ರಂದು ಈ ಸ್ಪರ್ಧೆ ನಡೆಯಲಿದ್ದು, ಜಿಲ್ಲೆಯಲ್ಲಿ ಸುಸ್ಥಿರ ,ಪರಿಸರ ಪೂರಕ, ಗ್ರಾಮೀಣ ಪ್ರವಾಸೋಧ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ನೂತನ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು, ಈಗಾಗಲೇ ಪ್ರಸಿದ್ಧಿ ಪಡೆದಿರುವ ಸ್ಥಳಗಳನ್ನು ಹೊರತು ಪಡಿಸಿ ಜನರನ್ನು ಆಕರ್ಷಿಸಬಲ್ಲ, ಕಲೆ ಕರಕುಶಲಕರ್ಮಿಗಳಿಗೆ ಅವಕಾಶ ನೀಡಬಲ್ಲ ಹೊಸ ಜಾಗಗಳಕುರಿತು ಮೂರು ನಿಮಿಷ ಮೀರದ ವಿಡಿಯೋವನ್ನು ಈ ಮೇಲ್ ಅಥವಾ 8660881493 ಗೆ ವಾಟ್ಸಪ್ ಮೂಲಕ ಕಳುಹಿಸಬಹುದು. ಸಾರ್ವಜನಿಕರು ಸ್ಪರ್ಧೆಗಾಗಿ ಸೆ.25 ರೊಳಗೆ ವಿಡಿಯೋ ಕಳುಹಿಸಬೇಕಾಗಿದ್ದು, ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!