ಕೋಟ- ಮಾತು ಬರದ ಅನಾಥ ಯುವಕನ ರಕ್ಷಣೆ
ಕೋಟ: ಕೋಟ ವಿವೇಕ ಹೈಸ್ಕೂಲ್ ಬಳಿ ಇರುವ ಬಸ್ಸ್ ನಿಲ್ದಾಣದಲ್ಲಿ ಕೆಲವು ದಿನಗಳಿಂದ ಅಲ್ಲೇ ಸುತ್ತಾಡುತ್ತಿದ್ದ, ಮಾತು ಬಾರದ ಯುವಕನನ್ನು ರೋಟರಿ ಕ್ಲಬ್ ಕೋಟ ಸಿಟಿಯ ಸದಸ್ಯರ ಮಾನವೀಯ ಕಾರ್ಯದಿಂದ ಹೊಸಬದುಕು ನೀಡಲಾಯಿತು.
ಕ್ಲಬ್ನ ಸದಸ್ಯ ಶಿವಾನಂದ ನಾಯರಿ ಅವರ ಮಾಹಿತಿ ಮೇರೆಗೆ ತಡರಾತ್ರಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರರವರು ಕೂಡಲೇ ಸ್ಥಳಾಕಾಗಮಿಸಿ ಯುವಕನನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಾತು ಬಾರದ ಕಾರಣ ಯಾವುದೇ ಮಾಹಿತಿ ತಿಳಿದುಬಂದಿಲ್ಲ.ರಕ್ಷಣಾ ಕಾರ್ಯದಲ್ಲಿ ರೋಟರಿ ಕ್ಲಬ್ ಕೋಟ ಸಿಟಿಯ ನಿತ್ಯಾನಂದ ನಾಯರಿ, ವಿಷ್ಣುಮೂರ್ತಿ ಉರಾಳ, ಕಾರ್ಯದರ್ಶಿ ಶಿವಾನಂದ ನಾಯರಿ, ಮಂಜುನಾಥ ಬೈಲೂರು ಯುವಕನ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.
ಕೋಟ ಹೈಸ್ಕೂಲ್ ಬಳಿ ಸುತ್ತಾಡುತ್ತಿದ್ದ ಮಾತು ಬಾರದ ಯುವಕನನ್ನು ಕೋಟ ರೋಟರಿ ಕ್ಲಬ್ ಸದಸ್ಯರು ಸರಳಬೆಟ್ಟು ಹೊಸಬೆಳಕು ಆಶ್ರಮಕ್ಕೆ ಸ್ಥಳಾಂತರಿಸಿ ಮಾನವೀಯತೆ ಮೆರೆದರು.