ಜು.6 ರಂದು ಡಿಕೆಶಿ ಉಡುಪಿಗೆ- ಮೀನುಗಾರರ ಅಹವಾಲು ಸ್ವೀಕಾರ

ಉಡುಪಿ ಜು.3(ಉಡುಪಿ ಟೈಮ್ಸ್ ವರದಿ): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಜು.6 ರಂದು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ದ.ಕ ಜಿಲ್ಲಾ ಪ್ರವಾಸದ ಬಳಿಕ ಜು.6 ರಂದು ಉಡುಪಿ ಜಿಲ್ಲೆಗೆ ಆಗಮಿಸುವ ಅವರು ಅಂದು ಬೆಳಿಗ್ಗೆ 11 ಗಂಟೆ ವೇಳೆಗೆ ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳ ವೀಕ್ಷಣೆ ನಡೆಸಲಿದ್ದಾರೆ. ಹಾಗೂ ಮಲ್ಪೆಯಲ್ಲಿ ನಡೆಯುವ ಉಡುಪಿ ಜಿಲ್ಲಾ ಮೊಗವೀರರ ಕುಂದುಕೊರತೆಗಳ ಅಧ್ಯಯನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆ ವೇಳೆಗೆ ಕೋವಿಡ್ ಸಹಾಯ ಹಸ್ತದ ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಬಳಿಕ ಸಂಜೆ 6 ಗಂಟೆಗೆ ಕುಂದಾಪುರಕ್ಕೆ ತೆರಳಿ ವಾಸ್ತವ್ಯ ಹೂಡುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!