ಅನುದಾನರಹಿತ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ

ಉಡುಪಿ ಜು.3(ಉಡುಪಿ ಟೈಮ್ಸ್ ವರದಿ): ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಗಳಿಗೆ 2021-22ನೇ ಸಾಲಿಗೆ 10347.25 ಲಕ್ಷ ರೂ. ಕೋವಿಡ್ ವಿಶೇಷ ಪ್ಯಾಕೇಜ್ ಪರಿಹಾರ ಬಿಡುಗಡೆ ಗೊಳಿಸಿ ಸರಕಾರ ಆದೇಶ ನೀಡಿದೆ.

ಈ ಬಗ್ಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಯವರು ಆದೇಶ ಹೊರಡಿಸಿದ್ದು, ಅದರಂತೆ, ರಾಜ್ಯದಲ್ಲಿ ರುವ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ 1,72,945 ಶಿಕ್ಷಕರು ಮತ್ತು 34,000 ಬೋಧಕೇತರ ಸಿಬ್ಬಂದಿಗಳು ಒಳಗೊಂಡಂತೆ ಒಟ್ಟು 2,06,945 ಸಿಬ್ಬಂದಿಗಳಿಗೆ ತಲಾ ರೂ.5,000.01 ರಂತೆ ಒಟ್ಟು ರೂ.10347.25 ಲಕ್ಷಗಳ ಅನುದಾನವನ್ನು ಕೋವಿಡ್-19 ವಿಶೇಷ ಪ್ಯಾಕೇಜ್ ಪರಿಹಾರ ಧನವಾಗಿ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.

ಅದರಂತೆ ಬಿಡುಗಡೆಗೊಳಿಸಲಾದ ಅನುದಾನವನ್ನು ಸರ್ಕಾರೇತರ ಪ್ರಾಥಮಿಕ ಶಾಲೆಗಳಿಗೆ ಸಹಾಯ ಆರ್.ಟಿ.ಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮದಲ್ಲಿ ಇದುವರೆಗೆ ಬಿಡುಗಡೆ ಮಾಡಲಾದ ಮತ್ತು ಮಾಡಲಾಗುವ ಅನುದಾನದಿಂದ ನಿಯಮಾನುಸಾರ ಭರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು
ಆದೇಶಿಸಿದ್ದಾರೆ.

ಬಿಡುಗಡೆ ಮಾಡಲಾದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು, ಹಾಗೂ ಬಿಡುಗಡೆಗೊಳಿಸಲಾದ ಅನುದಾನಕ್ಕೆ ಇಲಾಖೆ ಯ ಆಯುಕ್ತರು ಸೂಕ್ತ ಲೆಕ್ಕ ಪತ್ರಗಳನ್ನು ಇಡತಕ್ಕದ್ದು,ಇನ್ನು ಬಿಡುಗಡೆಗೊಳಿಸಲಾದ ಅನುದಾನವನ್ನು 2020-21ನೇ ಸಾಲಿಗೆ SATS/ UDISE ತಂತ್ರಾಂಶದಲ್ಲಿ ಈಗಾಗಲೇ ನೋಂದಾಯಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಖಜಾನೆ-2 ತಂತ್ರಾಂಶದ ಅಡಿಯಲ್ಲಿ DBT (Direct Beneficiary Transfer) ಮೂಲಕ ಕೋವಿಡ್-19 ವಿಶೇಷ ಪ್ಯಾಕೇಜ್ ಪರಿಹಾರ ಧನವನ್ನು ವರ್ಗಾಯಿಸಲಾಗುವುದು.

ಪರಿಹಾರ ಧನವನ್ನು ಬಿಡುಗಡೆಗೊಳಿಸುವ ಮುನ್ನ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಯು ಆಧಾರ್‌ನೊಂದಿಗೆ ಸಂಯೋಜಿಸಲ್ಪಟ್ಟಿರುವುದನ್ನು ಖಾತರಿಪಡಿಸಿಕೊಳ್ಳತಕ್ಕದ್ದು, ಹಾಗೂ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ತಿಂಗಳು ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಂ (ಆವಲೋಕನ) ತಂತ್ರಾಂಶದಲ್ಲಿ ಇಂದೀಕರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

1 thought on “ಅನುದಾನರಹಿತ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ

  1. ಅಡುಗೆ ಸಿಬ್ಬಂದಿ ಗಳಿಗೆ.. ಸರಕಾರ ಏನು… ಕೊಡುತ್ತಿದೆ….ಇವರು ಅವರ ಕಣ್ಣಿಗೆ… .. ಕಾಣಿಸುವುದು… ಇಲ್ವಾ…. ಅವ್ರಿಗೆ ಸಂಬಳ 2500/- ಆದರೂ.. ಅವರು… ಮಾಡಿದ ಪ್ರಾಮಾಣಿಕ ಕೆಲಸಕ್ಕೆ ಸರಕಾರ… ಅವಮಾನ ಮಾಡುತ್ತಿದೆ…

    ಇವರ ಬಗ್ಗೆ ಸಲ್ಪ… ಯೋಚನೆ ಮಾಡಿ…

    ಇವರಿಗೂ…ಸಂಬಳ ಜಾಸ್ತಿ..ಮಾಡಿ… ವಿಶೇಷ ಪ್ಯಾಕೆಜ್ ನೀಡಿ…

Leave a Reply

Your email address will not be published. Required fields are marked *

error: Content is protected !!