ಪಡುಕರೆ ಸರ್ಕಾರಿ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಕೋಟ(ಉಡುಪಿ ಟೈಮ್ಸ್ ವರದಿ) : ಲಕ್ಷ್ಮೀ ಸೋಮ ಬಂಗೇರ ಸ.ಪ್ರ.ಕಾಲೇಜು ಇಲ್ಲಿಗೆ ರಾಜ್ಯ ಸರಕಾರದ ಮಹತ್ವದ ಯೋಜನೆಯಾದ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭ ಕೋವಿಡ್ ನಿಯಮಾನುಸಾರ ನಡೆಯಿತು.
ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ವಿತರಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್ ಕುಂದರ್ ಸರಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಆಯಾ ಸರಕಾರಗಳು ಕಟಿಬದ್ಧರಾಗಿವೆ.ಸರಕಾರಿ ಕಾಲೇಜುಗಳು ಖಾಸಗಿರಂಗದ ಕಾಲೇಜಿಗಳಿಗಿಂತ ಹೆಚ್ಚಿನ ಮಹತ್ವಪಡೆಯುತ್ತಿವೆ.ಆದ್ದರಿಂದ ಸರಕಾರಿ ಶಾಲೆ,ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಕೂಡಾ ಹೆಚ್ಚುತ್ತಿರುವುದು ಕಾರಣವಾಗಿದೆ.ಸರಕಾರದಿಂದ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ಬಳಸಿಕೊಂಡು ಮನ್ನೆಡೆಯಿರಿ ಎಂದರು.
ಕಾಲೇಜಿ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಅಧ್ಯಕ್ಷತೆ ವಹಿಸಿದರು. ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್,ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ್ ಎಂ ವೈದ್ಯ ಪ್ರಾಸ್ತಾವನೆಗೈದರು.ನಿತೀನ್ ಎ ಚೋಳ್ಳೆಕರ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ಉಪನ್ಯಾಸಕ ಮಂಜುನಾಥ್ ಆಚಾರ್ ನಿರೂಪಿದರು.ಉಪನ್ಯಾಸಕ ರವಿಪ್ರಸಾದ್ ವಂದಿಸಿದರು.