ನಿಷೇಧಿತ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೇ ಟ್ರೆಕ್ಕಿಂಗ್:‌ 103 ಪ್ರವಾಸಿಗರ ಬಂಧನ

ಚಿಕ್ಕಮಗಳೂರು: ಅನುಮತಿ ಇಲ್ಲದೇ ಟ್ರೆಕ್ಕಿಂಗ್‌ ನಡೆಸುತ್ತಿದ್ದ 103 ಪ್ರವಾಸಿಗರನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಇಂದು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಆಳವಾದ ಕಾಡು ಪ್ರದೇಶದಲ್ಲಿ ಸಂಭವಿಸಿದೆ.

ಕಾನೂನು ಬಾಹಿರವಾಗಿ ಅರಣ್ಯ ಪ್ರದೇಶ ಪ್ರವೇಶಿಸಿ ಟ್ರೆಕ್ಕಿಂಗ್‌ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಬಣಕಲ್‌ ಹಾಗೂ ಬಾಳೂರು ಪೊಲೀಸ್‌ ಠಾಣೆಗಳ ಪೊಲೀಸರು ದಾಳಿ ನಡೆಸಿ ಪ್ರವಾಸಿಗರನ್ನು ಬಂಧಿಸಲಾಗಿದೆ.
ಇನ್ನು, ಬಣಕಲ್‌ ಪಿಎಸ್‌ಐ ರೇಣುಕಾ ಮತ್ತು ಬಾಳೂರು ಪಿಎಸ್‌ಐ ದಿಲೀಪ್‌ ಕುಮಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಎಲ್ಲಾ 103 ಜನರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಪ್ರಯಾಣಿಸಿದ್ದ ಎರಡು ಪ್ರವಾಸಿ ಬಸ್ಸುಗಳು ಹಾಗೂ ಎರಡು ಪಿಕಪ್‌ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!