ನಿಮ್ಮ ಮುಖದ ಹೊಳಪನ್ನು ಹೆಚ್ಚಿಸಲು ಈ ಅಕ್ಕಿ ಹಿಟ್ಟು ಪೇಸ್ಟ್ ಉಪಯೋಗಿಸಿ..!

ನಮ್ಮ ಮುಖದ ಹೊಳಪನ್ನು ಹೆಚ್ಚಿಸಲು ನಾವು ಹಲವಾರು ಕ್ರೀಂಗಳನ್ನು ಬಳಸುತ್ತೇವೆ. ಆದರೆ ಈ ಕ್ರೀಂ ಗಳಲ್ಲಿ ಅನೇಕ ಕೆಟ್ಟ ಬ್ಯಾಕ್ಟೀರಿಯಗಳಿರುತ್ತವೆ ಇದು ನಮ್ಮ ಮುಖದ ಹೊಳಪನ್ನು ಹಾಳುಮಾಡುತ್ತದೆ. ಆದ್ದರಿಂದ ಮನೆಯಲ್ಲೇ ಇರುವ ಅಕ್ಕಿ ಹಿಟ್ಟನ್ನು ಬಳಸಿ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.
ಅಕ್ಕಿ ಹಿಟ್ಟು ಮುಖಕ್ಕೆ ಬಳಸುವುದರಿಂದ ತ್ವಚೆಯ ಹೊಳಪು ಹೆಚ್ಚಾಗುತ್ತದೆ ಹಾಗೂ ಇವು ಮೊಡವೆಗಳನ್ನು ನಿಯಂತ್ರಿಸುತ್ತದೆ. ಹಾಗಾದ್ರೆ ಈ ಅಕ್ಕಿ ಹಿಟ್ಟಿನ ಪೇಸ್ಟ್ ಮಾಡುವ ವಿಧಾನದ ಕುರಿತು ನಾವು ನಿಮಗೆ ಹೇಳ್ತೀವಿ ಮುಂದಿನ ಮಾಹಿತಿ ಓದಿ..

ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಓಟ್ಸ್, ಒಂದು ಚಮಚ ಹಾಲು ಮತ್ತು ಒಂದು ಚಮಚ ಜೇನುತುಪ್ಪ. ಇವುಗಳನ್ನು ಗಟ್ಟಿಯಾಗುವವರೆಗೂ ಮಿಕ್ಸ್ ಮಾಡಿ ನಂತರ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಸುಮಾರು ಎಂಟರಿಂದ ಹತ್ತು ನಿಮಿಷಗಳ ಕಾಲ ಇಡಬೇಕು. ನಂತರ ಅದನ್ನು ತಣ್ಣೀರಿನಿಂದ ತೊಳೆಯಬೇಕು. ಇದರಿಂದ ನಿಮ್ಮ ಮುಖದಲ್ಲಿ ಹೊಳಪುಗಳು ಹೆಚ್ಚಾಗಿ ಯಾವುದೇ ತರಹದ ಕಲೆಗಳಿದ್ದರೂ ಸಹ ದೂರವಾಗುತ್ತದೆ.ಇದನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಮುಖದಲ್ಲಿ ಯಾವುದೇ ತರಹದ ಅಲರ್ಜಿಗಳು ಕೂಡ ಇರುವುದಿಲ್ಲ. ಅಕ್ಕಿ ಹಿಟ್ಟಿನಲ್ಲಿ ಎಣ್ಣೆಯನ್ನು ಹೀರಿಕೊಳ್ಳುವ ಗುಣವಿದ್ದು, ಆಯಿಲಿ ಫೇಸ್ ಇರುವವರು ಇದನ್ನು ಹಚ್ಚಿಕೊಳ್ಳುವುದರಿಂದ ಅದು ಕೂಡ ಸರಿಯಾಗುತ್ತದೆ. ಆದ್ದರಿಂದ ಇದನ್ನು ವಾರದಲ್ಲಿ 2 ರಿಂದ 3 ಸಲ ಬಳಸಿ ಇದು ನಿಮ್ಮ ತ್ವಚೆಯನ್ನು ಉತ್ತಮವಾಗಿಸುತ್ತದೆ.

Leave a Reply

Your email address will not be published. Required fields are marked *

error: Content is protected !!