ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಜು.ಕೋಟಿ ಚೆನ್ನಯ್ಯ ನಾಟಕ ಪ್ರದರ್ಶನ
ಉಡುಪಿ: ಬಹಳಷ್ಟು ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜಕತ್ವ ವಹಿಸಿಕೊಂಡು ಬಹಳ ಜನಪ್ರಿಯಗೊಂಡಿರುವ ಸಂಸ್ಥೆ ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ಮಂಗಳೂರಿನ ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದ, ಪ್ರಕೃತಿ ಕಲಾವಿದೆರ್ ಕುಡ್ಲ ಇವರ ಅಭಿನಯದಲ್ಲಿ , ಕದ್ರಿ ಶ್ರೀ ನವನೀತ ಶೆಟ್ಟಿ ರಚಿಸಿರುವ ಬಿರ್ಧ್ ದ ಬೀರೆರ್ ಕೋಟಿ ಚೆನ್ನಯೆರ್ ಎಂಬ ತುಳು ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಇದೇ ಜುಲೈ 27, ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಉದ್ಯಾವರದ ಜೇವಿಯರ್ ಸಭಾ ಭವನದಲ್ಲಿ ನಡೆಯಲಿದೆ.
ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಇರುವ ನಾರಾಯಣ ಗುರು ಯುವ ವೇದಿಕೆ ಉಡುಪಿ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗ ಳನ್ನು ಹಮ್ಮಿ ಕೊಂಡು ಬಂದಿರುವ ಯಶಸ್ವೀ ಸಂಸ್ಥೆ ಆಗಿರುತ್ತದೆ. ಶೂದ್ರ ಶಿವ, ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ , ಶಂಭುಕಲ್ಲು ಕ್ಷೇತ್ರ ಮಹಾತ್ಮೆ ಮುಂತಾದ ಇತಿಹಾಸ ಹಿನ್ನೆಲೆಯ ಕಾರ್ಯಕ್ರಮದ ಜೊತೆ, ತುಳು ನಾಟಕ, ನಾರಾಯಣ ಗುರುಗಳ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂಬ ಸಂದೇಶವನ್ನು ಪ್ರತಿ ಕಾರ್ಯಕ್ರದಲ್ಲಿ ಕೂಡ ಸಂಬಂಧಪಟ್ಟ ಸಮನ್ಮೂಲ ವ್ಯಕ್ತಿಗಳ ಮೂಲಕ ಗುರು ಸಂದೇಶ ಎಂಬ ಹೆಸರಿನಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ವಿಶಿಷ್ಟ ಕಾರ್ಯಕ್ರವನ್ನು ನಡೆಸಿಕೊಂಡು ಬಂದಿರುವ ಕೀರ್ತಿ ಶ್ರೀ ನಾರಾಯಣ ಗುರು ಯುವ ವೇದಿಕೆಯದ್ದು.
2025 ಇಸವಿಯಲ್ಲಿ ಕಳೆದ 7 ತಿಂಗಳಲ್ಲಿ ಮೂರನೇ ಬಾರಿಗೆ ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡ ಕೀರ್ತಿ ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿಯದ್ದು. ಪ್ರಖ್ಯಾತ ಕಲಾವಿದರಿಂದ ಕೂಡಿದ, ಭಕ್ತಿ ಪ್ರಧಾನ ನಾಟಕಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡಬೇಕು ಎಂಬುದು ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಆಸಯವಾಗಿದೆ. ಇದರ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಅಧ್ಯಕ್ಷ ಮಿಥುನ್ ಅಮೀನ್, ಪದಾಧಿಕಾರಿಗಳಾದ ಪ್ರಶಾಂತ್ ಪೂಜಾರಿ, ಶಬರೀಶ್ ಸುವರ್ಣ, ಪ್ರಸನ್ನ ಪೂಜಾರಿ, ದಿವಾಕರ್ ಬೊಳ್ಜೆ, ಲಕ್ಷ್ಮಣ್ ಸನಿಲ್, ಸುಪ್ರೀತ್ ಸುವರ್ಣ, ಸಾಯಿರಾಜ್ ಕೋಟ್ಯಾನ್, ಸಚಿನ್ ಸಾಲ್ಯಾನ್ , ಮಹೇಶ್ ಬೈಂದೂರು , ವಿಕೇಶ್ ಹೆಜಮಾಡಿ ಮುಂತಾದವರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.





