ಮೂಸಂಬಿ, ಹುಣಸೆ ಹುಳಿಯಿಂದಲೂ ಹೆಚ್ಚುತ್ತೆ ದೇಹದ ಇಮ್ಯುನಿಟಿ ಪವರ್

ದೆಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಇದ್ದರೆ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತೇವೆ. ಅಲ್ಲದೆ ಮಾರಕ ವೈರಸ್‌ಗಳು ಕೂಡ ಬಹು ಬೇಗ ದೇಹವನ್ನು ಸೇರುತ್ತವೆ. ಹೀಗಾಗಿ ನಾವು ಕೆಲವು ಹಣ್ಣುಗಳನ್ನು ಸೇವಿಸುವ ಮುಖಾಂತರ ದೇಹದಲ್ಲಿ ಇಮ್ಯೂನನಿಟಿ ಪವರ್ ಹೆಚ್ಚಿಸಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ದೇಹದಲ್ಲಿ ಬಿಳಿ ರಕ್ತಕಣ ಹೆಚ್ಚಾಗಬೇಕಾದರೆ ವಿಟಮಿನ್ ಸಿ ದೇಹಕ್ಕೆ ಬೇಕು. ಇದು ನಿಂಬೆಹಣ್ಣು, ಕಿತ್ತಳೆ, ಮೂಸುಂಬೆ ಮತ್ತು ಹುಣಸೆ ಹುಳಿಯಿಂದ ಸಿಗುತ್ತದೆ. ಈ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಈ ಹಣ್ಣುಗಳಿಂದಲೂ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಲಭ್ಯವಿರುವುದು ಕ್ಯಾಪ್ಸಿಕಂನಲ್ಲಿ. ಹಾಗಾಗಿ ಇದನ್ನು ನಿಮ್ಮ ಆಹಾರ ಕ್ರಮಗಳಲ್ಲಿ ಸೇರಿಸಿಕೊಳ್ಳುವುದು ಉತ್ತಮ. ರಕ್ತದೊತ್ತಡವನ್ನು ತಗ್ಗಿಸುವ ಗುಣವಿರುವ ಬೆಳ್ಳುಳ್ಳಿ, ಪೋಷಕಾಂಶಗಳ ಆಗರವಾಗಿರುವ ಬ್ರೊಕೋಲಿ, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶುಂಠಿ, ದೇಹಕ್ಕೆ ಆರೋಗ್ಯಕಾರಿ ಕೊಬ್ಬನ್ನು ಒದಗಿಸುವ ಬಾದಾಮಿ, ಔಷಧೀಯ ಗುಣವುಳ್ಳ ಅರಶಿಣವನ್ನು ಆಹಾರ ರೂಪದಲ್ಲಿ ಸೇವಿಸುತ್ತಿರುವುದರಿಂದ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!