ಶರಣ್ ಪಂಪವೆಲ್ ಮೇಲೆ ಹಾಕಿರುವ ಕೇಸು, ನಿರ್ಬಂಧ ಆದೇಶ ಹಿಂಪಡೆಯಬೇಕು: ದಿನೇಶ್ ಮೆಂಡನ್
ಉಡುಪಿ: ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನು ಖಂಡಿಸಿ ಮಾಧ್ಯಮದಲ್ಲಿ ನೀಡಿದ ಹೇಳಿಕೆಯ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ. ಹಲವು ವರ್ಷಗಳಿಂದ ಅಕ್ರಮ ಗೋ ಸಾಗಾಟ, ಗೋ ಹತ್ಯೆ ಅಲ್ಲದೆ ಗೋ ಕಳ್ಳತನ ನಡೆಯುತ್ತಿದ್ದು. ಇದರಿಂದ ಗಲಭೆಗಳು ನಡೆದು ಜಿಲ್ಲೆ ಪ್ರಕ್ಷುಬ್ಧರಾಗಿರುವ ಘಟನೆಗಳು ನಡೆದಿತ್ತು. ಈ ಗೋ ಮಾಫಿಯಾದ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದ್ದು, ಇದರ ಬಗ್ಗೆ ಮಾತನಾಡಿದ ಕಾರಣವನ್ನಿಟುಕೊಂಡು ರಾಜ್ಯದಲ್ಲಿ ಓಲೈಕೆ ರಾಜಕಾರಣಕ್ಕೋಸ್ಕರ ಶರಣ್ ಪಂಪವೆಲ್ ರವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದು ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಈ ರೀತಿಯ ಕ್ರಮದಿಂದ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಅವರಿಗೆ ಚಿಕ್ಕಮಗಳೂರು ಜಿಲ್ಲಾ ಪ್ರವೇಶ ನಿರ್ಬಂಧಿಸಿರುವುದು ಯಾರನ್ನು ಓಲೈಕೆ ಮಾಡಲು?. ರಾಜ್ಯದಲ್ಲಿ ಈ ಸರ್ಕಾರ ಬಂದ ನಂತರ ಹಿಂದೂ ನಾಯಕರನ್ನು ದಮನಿಸುವ ಕೆಲಸ ನಡೆಯಿತ್ತಿದ್ದು, ಸಂವಿಧಾನ ಆಶಯಕ್ಕೆ ವಿರೋಧವಾಗಿದೆ, ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ತಕ್ಷಣ ಅವರ ಮೇಲೆ ಹಾಕಿರುವ ಕೇಸು ಮತ್ತು ನಿರ್ಬಂಧ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.





