ಪ್ರತಿದಿನ ಎಳನೀರು ಕುಡಿಯಿರಿ ರೋಗಪ್ರತಿರೊಧಕ ಶಕ್ತಿ ಹೆಚ್ಚಿಸಿಕೊಳ್ಳಿ..!
ಎಳನೀರಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಬೇಸಿಗೆಯಲ್ಲಂತೂ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ಇದೀಗ ಕೇವಲ ಎಳನೀರು ಮಾತ್ರವಲ್ಲ, ಎಳನೀರು ಜ್ಯೂಸ್ ಅಂತಾ ಕೂಡ ಮಾರ್ಕೇಟ್ ನಲ್ಲಿ ಲಭ್ಯವಾಗುತ್ತದೆ. ಎಳನೀರಿನಲ್ಲಿರುವ ಆರೋಗ್ಯ ಪ್ರಯೋಜನಗಳನ್ನ ತಿಳಿದುಕೊಂಡರೆ ಅದನ್ನ ಬೇಡ ಅನ್ನುವವರೇ ಇಲ್ಲ. ಹಾಗಾದ್ರೆ ಎಳನೀರಿನ ಆರೋಗ್ಯ ಪ್ರಯೋಜನಗಳ ಕುರಿತು ಮಾಹಿತಿ ಕೊಡ್ತೀನಿ ಮುಂದಿನ ಮಾಹಿತಿ ಓದಿ.

ಎಳನೀರಿನೊಂದಿಗೆ ನಿಂಬೆ, ಪಾದರಲವಣ, ಜೇನು, ಶುಂಠಿ ಮುಂತಾದವುಗಳನ್ನು ಬೆರೆಸಿ ನಿತ್ಯವೂ ಸೇವಿಸಿದರೆ ಅನೇಕ ಪ್ರಯೋಜಗಳು ಇವೆ.

ಹೃದಯದ ಆರೋಗ್ಯಕ್ಕೆ ಎಳನೀರು ಅತ್ಯಂತ ಪ್ರಯೋಜಕಾರಿಯಾಗಿದೆ. ಮಧುಮೇಹಿಗಳಲ್ಲಿ ಎಳನೀರು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೈಪರ್‌ಗ್ಲೆಸೀಮಿಯಾವನ್ನೂ ಇದು ನಿಯಂತ್ರಿಸುತ್ತದೆ.
ಎಳನೀರು ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿದರೆ, ಚಳಿಗಾಲದಲ್ಲಿ ದೇಹವನ್ನು ಶುಷ್ಕವಾಗದಂತೆ ಕಾಪಾಡುತ್ತದೆ. ಪ್ರತಿದಿನ ಎಳನೀರು ಸೇವಿಸುವುದರಿಂದ ರೋಗಪ್ರತಿರೋಧಕ ಶಕ್ತಿ ಹೆಚ್ಚುತ್ತದೆ.





