ಒಡೆದ ಹಿಮ್ಮಡಿಯಿಂದ ತೊಂದರೆ ಅನುಭವಿಸ್ತಿದ್ರೆ ಬಳಸಿ ಈ ಕ್ರೀಂ..!
ಹೆಚ್ಚಾಗಿ ಚಳಿಗಾಲದಲ್ಲಿ ಬಿರುಕು ಬಿಡುವ ಹಿಮ್ಮಡಿ, ಧೂಳಿಗೆ ಹೋದಾಗ ಇನ್ನಷ್ಟು ಇಮ್ಮಡಿಯಾಗುತ್ತದೆ. ಇದರ ನೋವು ಅನುಭವಿಸಿದವರಿಗೇ ಗೊತ್ತಿರುತ್ತದೆ. ಇದರಿಂದ ಒಮ್ಮೆ ಮುಕ್ತಿ ಸಿಕ್ಕರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸಿರುತ್ತಾರೆ.ಇದರಿಂದ ನಡೆದಾಡುವಾಗ ತುಂಬಾ ನೋವುಂಟಾಗುತ್ತದೆ. ಮನೆಮದ್ದನ್ನು ಬಳಸಿ ಈ ನರಕಯಾತನೆಯಿಂದ ದೂರಾಗಬಹುದಾಗಿದೆ.

ವ್ಯಾಸಲಿನ್ 1 ಚಮಚ, ರೋಸ್ ವಾಟರ್ 1ಚಮಚ, ಗ್ಲಿಸರಿನ್ 3 ಹನಿ, ಕೊಬ್ಬರಿ ಎಣ್ಣೆ 1 ಚಮಚ ಇವಿಷ್ಟನ್ನು ಮಿಕ್ಸ್ ಮಾಡಿ ಕ್ರೀಂ ತಯಾರಿಸಿ. ಬಳಿಕ ಒಂದು ಬಕೆಟ್‌ನಲ್ಲಿ 1 ಚಮಚ ಉಪ್ಪು, ನಿಂಬೆ ರಸ , ಶಾಂಪು ಹಾಕಿ ಮಿಕ್ಸ್ ಮಾಡಿ ನಿಮ್ಮ ಕಾಲನ್ನು ಆ ನೀರಿನಲ್ಲಿ 20 ನಿಮಿಷ ಇಟ್ಟುಕೊಳ್ಳಿ. ಬಳಿಕ ಕಾಲನ್ನು ಚೆನ್ನಾಗಿ ಒರೆಸಿಕೊಂಡು ಹಿಮ್ಮಡಿ ಒಡೆದ ಕಡೆ ಈ ಕ್ರೀಂ ಹಚ್ಚಿ ಮಸಾಜ್ ಮಾಡಿ ಕಾಲಿಗೆ ಪ್ಲಾಸ್ಟಿಕ್ ಹಾಕಿಕೊಳ್ಳಿ. ಇದನ್ನು ರಾತ್ರಿ ವೇಳೆ ಹಚ್ಚಿ. ಹೀಗೆ ಮಾಡಿದ್ರೆ ಒಡೆದ ಹಿಮ್ಮಡಿ ನಿವಾರಣೆಯಾಗಿ ಪಾದ ಸಾಪ್ಟ್ ಆಗುತ್ತದೆ.





