ನಾ ಬೋರ್ಡು ಇರದ ಬಸ್ಸನು ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ನಿಧನ

ಮುಂಬೈ: ಹುಡಗರು ಸಿನಿಮಾದ ಪಂಕಜಾ ಹಾಡಿನ ಶೆಫಾಲಿ ಜರಿವಾಲಾ(42) ಹೃದಯಾಘಾತದಿಂದ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಬಾಲಿವುಡ್‌ ನ ಖ್ಯಾತ ನಟಿ ಹಾಗೂ ಮಾಡೆಲ್‌ ಆಗಿದ್ದ ಶೆಫಾಲಿ ಜರಿವಾಲಾ ಹಿಂದಿ ಬಿಗ್‌ ಬಾಸ್‌ 13ರ ಸ್ಪರ್ಧಿಯಾಗಿದ್ದರು. ತಡರಾತ್ರಿ ಶೆಫಾಲಿ ಅವರಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಪತಿ ಪರಾಗ್‌ ತ್ಯಾಗಿ ಅವರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್‌ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಗುಜರಾತ್‌ನ ಅಹಮದಾಬಾದ್‌ ನಲ್ಲಿ ಡಿಸೆಂಬರ್‌ 15, 1982ರಂದು ಜನಿಸಿದ ಶೆಫಾಲಿ ಜರಿವಾಲಾ, ಮುಂಬೈನಲ್ಲಿ ಬೆಳೆದಿದ್ದರು. 2002ರಲ್ಲಿ ಕಾಂತ ಲಗಾ ಎನ್ನುವ ಹಾಡಿನ ಮೂಲಕ ನಟಿ ಶೆಫಾಲಿಪ್ರಖ್ಯಾತಿ ಪಡೆದಿದ್ದರು. ೨೦೦೪ರಲ್ಲಿ ಹರ್ಮೀತ್‌ ಸಿಂಗ್‌ ಜೊತೆ ವಿವಾಹವಾಗಿದ್ದ ಶೆಫಾಲಿ, ಅವರಿಂದ ಡಿವೋರ್ಸ್‌ ಪಡೆದು ಬಳಿಕ 2014ರಲ್ಲಿ ಪರಾಗ್‌ ತ್ಯಾಗಿ ಅವರನ್ನು ವಿವಾಹವಾಗಿದ್ದರು.

Leave a Reply

Your email address will not be published. Required fields are marked *

error: Content is protected !!