ಮುಟ್ಟಿದರೆ ಮುನಿ ಗಿಡವನ್ನು ಬಳಸಿ ಕಾಯಿಲೆಗಳಿಂದ ದೂರವಿರಿ..!

ಮುಟ್ಟಿದರೆ ಮುನಿ ಗಿಡದ ಹೆಸರನ್ನು ಎಲ್ಲರೂ ಕೇಳಿರಬೇಕು. ಏಕೆಂದರೆ ಇದು ಅಷ್ಟು ಚಿರಪರಿಚಿತವಾದ ಗಿಡ. ಇದರ ಮೇಲೆಲ್ಲ ಬರಿ ಮುಳ್ಳುಗಳ ರಾಶಿ. ಎಷ್ಟೋ ಜನ ಇದನ್ನು ನೋಡಿದ ತಕ್ಷಣ ಬೈದುಕೊಂಡು ಕಿತ್ತಾಕುತ್ತಾರೆ. ಏಕೆಂದರೆ ಇದು ಕಾಲಿಗೆ ಚುಚ್ಚುವುದು ಜಾಸ್ತಿ. ಆದರೆ ಹಾಗೆ ಕಿತ್ತಾಕುವ ಬದಲು ಅದನ್ನು ಔಷಧಿಯ ರೂಪವಾಗಿ ಉಪಯೋಗಿಸಿದರೆ, ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಅಂದರೆ ಡಯಾಬಿಟಿಸ್ ಹಾಗೂ ಮದುಮೇಹ ಕಾಯಿಲೆ ಇರುವವರು ಇದನ್ನು ಬಳಸುವುದರಿಂದ ಕಾಯಿಲೆಯು ನಿಯಂತ್ರಣದಲ್ಲಿರುತ್ತದೆ.

ನಿಸರ್ಗದಲ್ಲಿ ಔಷಧಿ ಗುಣಗಳಿಂದ ಕೂಡಿದ ಹಲವಾರು ಗಿಡಗಳಿವೆ. ಇದರಿಂದ ಹಲವಾರು ಜನರಿಗೆ ಉಪಯೋಗ ಸಹ ಇದೆ ಹಾಗೂ ಪ್ರಾಣ ಉಳಿದಿರುವಂತಹ ಉದಾಹರಣೆಗಳು ಇವೆ. ಆದ್ದರಿಂದ ಇಂದು ಮುಟ್ಟಿದರೆ ಮುನಿ ಸಸ್ಯದ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಈ ಮುಟ್ಟಿದರೆ ಮುನಿ ಸಸ್ಯವು ಪೈಲ್ಸ್, ಮದುಮೇಹ, ಒತ್ತಡದಂತಹ ಅನೇಕ ಪ್ರಮುಖ ಕಾಯಿಲೆಗಳನ್ನು ಸಹ ಇದು ಸರಿ ಮಾಡುತ್ತದೆ. ಅದ್ದರಿಂದ ಇಂದು ಕೆಲವು ಜನರು ಆರೋಗ್ಯಕ್ಕೋಸ್ಕರ ಈ ಗಿಡಗಳನ್ನು ನೋಡುತ್ತಿದ್ದಾರೆ. ಈ ಗಿಡದ ಸ್ವಭಾವವೆಂದರೆ ನೀವು ಮುಟ್ಟಿದ ತಕ್ಷಣ ಇವು ಮಡಚಿಕೊಂಡುಬಿಡುತ್ತವೆ. ಇದನ್ನು ತಿಳಿದು ಔಷಧಿಯಾಗಿ ಬಳಸುವುದರಿಂದ ಅಸ್ತಮವನ್ನು ನಿಯಂತ್ರಣದಲ್ಲಿಡಬಹುದು. ನಿಮ್ಮ ದೇಹದಲ್ಲಿರುವ ನೋವನ್ನು ಇದು ನಿಯಂತ್ರಿಸುತ್ತದೆ. ಕೆಲವರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ, ಅಂತವರಿಗೆ ಇದು ಖಿನ್ನತೆಯನ್ನು ದೂರ ಮಾಡುತ್ತದೆ. ಒಂದು ವೇಳೆ ನಿಮಗೆ ಗಾಯವಾಗಿದ್ದರೆ ಇದನ್ನು ಹಚ್ಚುವುದರಿಂದ ಆ ಗಾಯವನ್ನು ಕೂಡ ಇದು ಗುಣ ಮಾಡುತ್ತದೆ. ಹಾಗೂ ಇದು ಪೈಲ್ಸ್ ಗಳಿಗೂ ಒಂದು ಉತ್ತಮ ಮನೆಮದ್ದಾಗಿದೆ. ಇದನ್ನು ಅರೆದುಕೊಂಡು ಪೈಲ್ಸ್ ಎಲ್ಲಿ ಆಗಿದೆಯೋ ಅಲ್ಲಿ ಲೇಪಿಸಿದ್ದಾರೆ ಅದರ ಫಲಿತಾಂಶ ನಿಮಗೆ ಗೋಚರಿಸುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಈ ಸಸ್ಯವನ್ನು ಬಳಸಿ ನಿಮಗೆ ಇರುವ ನೋವು, ಗಾಯ ಅಥವಾ ಇನ್ಯಾವುದೇ ಕಾಯಿಲೆಗಳಿಂದ ಇದರಿಂದ ದೂರವಿರಿ.

Leave a Reply

Your email address will not be published. Required fields are marked *

error: Content is protected !!