ಕಳೆದೆರಡು ದಶಕಗಳಿಂದ ಯುವಜನತೆ ಸಾವಿಗೆ ಆತ್ಮಹತ್ಯೆ ಕಾರಣ: ವಿಶ್ವ ಆರೋಗ್ಯ ಸಂಸ್ಥೆ

ಹೊಸದಿಲ್ಲಿ: ಕಳೆದ ಎರಡು ದಶಕದಿಂದ ಭಾರತದಲ್ಲಿ ಯುವಕರ ಸಾವಿಗೆ ಆತ್ಮಹತ್ಯೆಯೇ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2020-22ರ ಅವಧಿಯಲ್ಲಿ ಮೃತಪಟ್ಟ ಪ್ರತಿ ಆರು ಮಂದಿಯ ಪೈಕಿ ಒಬ್ಬರ ಸಾವಿಗೆ ಆತ್ಮಹತ್ಯೆ ಕಾರಣ ಎನ್ನುವುದು ದೃಢಪಟ್ಟಿದೆ. ಜಾಗತಿಕೆ ಮಟ್ಟದಲ್ಲಿ ಆತ್ಮಹತ್ಯೆ ಯುವಕರ ಸಾವಿಗೆ ಮೂರನೇ ಅತಿದೊಡ್ಡ ಕಾರಣವಾಗಿದೆ ಎನ್ನಲಾಗಿದೆ.

15-29 ವರ್ಷ ವಯೋಮಿತಿಯ ಯುವಕರ ಸಾವಿಗೆ ಆತ್ಮಹತ್ಯೆಯೇ ಕಾರಣ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಎಲ್ಲಾ ವಯೋಮಿತಿಯ ಜನರ ಸಾವಿಗೆ ಕಾರಣಗಳನ್ನು ವಿಶ್ಲೇಶಿಸಿದಾಗ ಹೃದಯ ರೋಗ ಸಮಸ್ಯೆ ಪ್ರಮುಖ ಕಾರಣವಾಗಿದ್ದು, ಉಸಿರಾಟದ ಸೋಂಕು ಮತ್ತು ಕ್ಯಾನ್ಸರ್‌ ಕೂಡ ಕಾರಣವಾಗಿದೆ. 2020-22ರ ಅವಧಿಯಲ್ಲಿ ಒಟ್ಟು ಮೃತಪಟ್ಟ ಯುವಕರ ಪೈಕಿ ಶೇಕಡಾ 17,1ರಷ್ಟು ಮಂದಿ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಶರಣಾಗಿರುವ ಯುವಜನತೆಯ ಪೈಕಿ ಶೆಕಡಾ ೧೮.೨ರಷ್ಟು ಯುವತಿಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇನ್ನು, ಉಳಿದಂತೆ ರಸ್ತೆ ಅಪಘಾತದಲ್ಲಿ ಶೆ.15.6 ಮಂದಿ, ಹೃದ್ರೋಗ ಸಮಸ್ಯೆಯಿಂದ ಶೇ.9,8ರಷ್ಟು ಮಂದಿ, ಉದ್ದೇಶ ಪೂರ್ವಕವಲ್ಲದ ಗಾಯಗಳಿಂದ ಶೆ.8,7ರಷ್ಟು ಮಂದಿ, ಜೀರ್ಣ ಸಂಬಂಧಿ ಕಾಯಿಲೆಗಳಿಂದ ಶೇ.6.4ರಷ್ಟು ಮಂದಿ, ಉಸಿರಾಟದ ಸೋಂಕಿನಿಂದ ಶೇ. ೪.೮ರಷ್ಟು ಮಂದಿ ಹಾಗೂ ಇನ್ನಿತರೆ ಕಾರಣಗಳಿಂದ 37.5 ರಷ್ಟು ಯುವಜನತೆ ಸಾವನ್ನಪ್ಪರುವ ಕುರಿತು ರಿಜಿಸ್ಟ್ರಾರ್‌ ಜನರಲ್‌ ಅಫ್‌ ಇಂಡಿಯಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!