ಜೇನುತುಪ್ಪವನ್ನು ಬಳಸಿ ಸದಾ ಆರೋಗ್ಯದಿಂದಿರಿ..!

ಜೇನಿನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಜೇನುತುಪ್ಪ ಅಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಹ ತುಂಬಾ ಇಷ್ಟ. ಅದರಲ್ಲೂ ಹೆಚ್ಚಿನ ಜನರಿಗೆ ಜೇನುತುಪ್ಪವೆಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಹಾಗೆಯೇ ಜೇನುತುಪ್ಪದಲ್ಲೂ ಕೂಡ ಅನೇಕ ಆರೋಗ್ಯಕ್ಕೆ ಬೇಕಾಗಿರುವ ಅಂಶಗಳು ಕೂಡ ಇವೆ. ಇದರಿಂದ ಹಲವಾರು ಕಾಯಿಲೆಗಳು ಕೂಡ ಗುಣವಾಗುತ್ತದೆ.

ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ಮೊದಲ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಏಕೆಂದರೆ ಆಯುರ್ವೇದದಲ್ಲಿ ಮಾಡುವ ಎಲ್ಲಾ ಔಷಧಿಗಳಿಗೂ ಇದನ್ನು ಬಳಸುತ್ತಾರೆ. ಹಾಗೆಯೇ ಜೇನುತುಪ್ಪವನ್ನು ಯಾವುದೇ ಕಾರಣಕ್ಕೂ ಬಿಸಿ ಪದಾರ್ಥಕ್ಕೆ ಸೇರಿಸಬಾರದು. ಏಕೆಂದರೆ ಜೇನು ತುಪ್ಪವನ್ನು ಬಿಸಿ ಪದಾರ್ಥಕ್ಕೆ ಸೇರಿಸುವುದರಿಂದ ಜೇನಿನ ಸತ್ವವೆಲ್ಲ ಕಳೆದುಕೊಂಡು ಹೋಗಿ ದೇಹಕ್ಕೆ ಅಡ್ಡ ಪರಿಣಾಮ ಉಂಟುಮಾಡುತ್ತದೆ. ತಲೆಯಲ್ಲಿನ ಕೂದಲು ಉದುರಿ ಚರ್ಮಕ್ಕೆ ಸಂಬAಧಿಸಿದ ಕಾಯಿಲೆಗಳು ಆರಂಭವಾಗುತ್ತದೆ..

ಜೇನುತುಪ್ಪದಲ್ಲಿ ಸಕ್ಕರೆ ಅಂಶ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೂ ಇದರಲ್ಲಿ ವಿಟಮಿನ್ ಬಿ ಹಾಗೂ ಮಿನರೆಲೆನ್ಸ್ ಗಳು, ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಆದ್ದರಿಂದ ಈ ಜೇನುತುಪ್ಪವು ಧನಾತ್ಮಕವಾಗಿ ನಮ್ಮ ದೇಹದಲ್ಲಿ ಒಳ್ಳೆ ಪರಿಣಾಮ ಬೀರುತ್ತದೆ. ಆದರೂ ಯಾವುದೇ ಇರಲಿ ಮಿತಿ ಇರಬೇಕು. ಯಾವುದನ್ನು ಹೆಚ್ಚಾಗಿ ತಿನ್ನಬಾರದು. ಹಾಗೆಯೇ ಜೇನುತುಪ್ಪವನ್ನು ಕೂಡ ಮಿತಿಯಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!