ದಿವ್ಯಾಂಗರು, ಅಶಕ್ತರು, ಕ್ಯಾನ್ಸರ್ ಪೀಡಿತರಿಗೆ ಪೌಷ್ಟಿಕ ಆಹಾರ ಕಿಟ್, ಗಾಲಿಕುರ್ಚಿ ವಿತರಣೆ
ಉಡುಪಿ: ಕೊಡವೂರು ವಾರ್ಡ್ ರಾಜ್ಯಕ್ಕೆ ಮಾದರಿಯಾಗಿ ಎಲ್ಲಾ ರೀತಿಯ ಸಂಘಟನೆ ಮತ್ತು ಎಲ್ಲಾ ಸಮಸ್ಯೆಗಳಿಗೂ ಉತ್ತರ ಕೊಡುವಂತಹದ್ದು ಕೊಡವೂರಿನಲ್ಲಿ ನಡೆಯುತ್ತಿದೆ. ಆದ್ದರಿಂದ ಕೊಡವೂರಿನಲ್ಲಿ ಸರ್ವೇ ಮಾಡಿ ದಿವ್ಯಾಂಗರ ಕಷ್ಟ ಸುಖಗಳಿಗೆ ಸ್ಪಂದನೆ ಕೊಡುವಂತಹ ದಿವ್ಯಾಂಗ ರಕ್ಷಣಾ ಸಮಿತಿ ತಂಡವನ್ನು ರಚಿಸಲಾಗಿದೆ. ದಿವ್ಯಾಂಗರಿಗೆ ಬೇಕಾದ ಅಗತ್ಯತೆ ಮತ್ತು ಸಲಕರಣೆಗಳನ್ನು ಕೊಡುವಂತಹ ವ್ಯವಸ್ಥೆ ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಎಮ್.ಸಿ.ಕೆ.ಎಸ್.ಎಫ್.ಎಫ್.ಹೆಚ್.ಕೆ.ಎ, ಬೆಂಗಳೂರು ಸಂಸ್ಥೆಯವರು ದುಡಿಯಲು ಸಾಧ್ಯವಿಲ್ಲದ ದಿವ್ಯಾಂಗರು ಮತ್ತು ಅಶಕ್ತರು, ಕ್ಯಾನ್ಸರ್ ಪೀಡಿತರು ನಾನಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪೌಷ್ಟಿಕ ಆಹಾರ ಕಿಟ್ ಮತ್ತು ಗಾಲಿಕುರ್ಚಿ ವಿತರಿಸುವ ಕಾರ್ಯಕ್ರಮ ವಿಪ್ರಶ್ರೀ ಸಭಾಭವನ ಕೊಡವೂರಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎಮ್.ಸಿ.ಕೆ.ಎಸ್.ಎಫ್.ಎಫ್.ಹೆಚ್.ಕೆ.ಎ ಬೆಂಗಳೂರು ಇದರ ಪ್ರಮುಖರಾದ ಶ್ರೀಮತಿ ನಿಧಿ ಎಸ್. ಮತ್ತು ಶ್ರೀಮತಿ ಜ್ಯೋತಿ, ಉಡುಪಿ ನಗರಸಭಾ ಸದಸ್ಯರಾದ ಶ್ರೀ ಕೆ. ವಿಜಯ ಕೊಡವೂರು, ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಕೊಪ್ಪಲ್ ತೋಟ ಹಾಗೂ ಕಾರ್ಯದರ್ಶಿ ಜಯ ಕಲ್ಮಾಡಿ, ವಿಆರ್‌ಡಬ್ಲ್ಯು ಸರ್ವೋತ್ತಮ್ ಹೆರ್ಗ, ಸಮಾಜ ಸೇವಕ ಅಖಿಲೇಶ್ ಎ ಉಜಿರೆ ಉಪಸ್ಥಿತರಿದ್ದರು.





