ಚಪಾತಿಯಿಂದ ನಿಮ್ಮ ತೂಕ ಕಡಿಮೆಯಾಗುತ್ತದೆಯೇ..?ಇಲ್ಲಿದೆ ಮಾಹಿತಿ..!
ಇಂದಿನ ದಿನಗಳಲ್ಲಿ ಚಪಾತಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇಂದು ನಮ್ಮ ದೇಶದಲ್ಲಿ ಚಪಾತಿ ಇಲ್ಲದಿದ್ದರೆ ಊಟ ಸೇರುವುದೇ ಇಲ್ಲ ಎನ್ನುವ ರೀತಿಯಲ್ಲಿ ಇದೆ. ಈ ಚಪಾತಿಯಿಂದ ಹಲವಾರು ಪ್ರಯೋಜನಗಳು ಕೂಡ ಇದೆ. ಕೆಲವು ಜನರು ಇದನ್ನು ಆರೋಗ್ಯದ ದೃಷ್ಟಿಯಿಂದ ತಿಂದರೆ ಇನ್ನು ಕೆಲವು ಜನರು ಊಟದ ಜೊತೆ ಸೇರಿಸಿಕೊಂಡು ತಿನ್ನುತ್ತಾರೆ. ಚಪಾತಿಯು ಎಲ್ಲಾ ವಯೋಮಾನದವರಿಗೂ ಒಂದು ಆರೋಗ್ಯಕರವಾದ ಆಹಾರ. ಕೆಲವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಚಪಾತಿಯನ್ನು ತಿನ್ನುತ್ತಾರೆ. ಆದರೆ ನಿಜವಾಗಲೂ ಚಪಾತಿ ತಿಂದರೆ ತೂಕ ಕಡಿಮೆಯಾಗುತ್ತದೆಯೇ? ಎನ್ನುವ ಮಾಹಿತಿ ಅವರಿಗೆ ಅಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಆದ್ದರಿಂದ ಅದರ ಬಗ್ಗೆ ಇಂದು ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳಿ.

ಚಪಾತಿಯನ್ನು ತಿನ್ನುವುದರಿಂದ ನಾವು ಫಿಟ್ ಆಗಿರುತ್ತೇವೆ. ಅಲ್ಲದೆ ಇದು ಹೆಚ್ಚು ಆಯಾಸವನ್ನು ಉಂಟುಮಾಡುವುದಿಲ್ಲ. ನಾವು ನಿಯಮಿತವಾಗಿ ಚಪಾತಿಯನ್ನು ಸೇವಿಸಿದರೆ ಖಂಡಿತವಾಗಿಯೂ ತೂಕ ಕಡಿಮೆಯಾಗುತ್ತದೆ ಮತ್ತು ಅನ್ನಸ ಬದಲು ಚಪಾತಿಯ ಜೊತೆ ಹಣ್ಣು ಮತ್ತೆ ತರಕಾರಿ ತಿಂದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಈ ಚಪಾತಿಯಲ್ಲಿ 0.4 ಗ್ರಾಂನಷ್ಟು ನಾರಿನಂಶವಿರುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವರು ನಾರಿನಂಶ ಕಡಿಮೆ ಇರುವ ಪದಾರ್ಥವನ್ನು ಸೇವಿಸಿದರೆ ಒಳ್ಳೆಯದು.

ತೂಕ ಇಳಿಸುವವರು ಕನಿಷ್ಠ 2 ರಿಂದ 3 ಚಪಾತಿಯನ್ನು ತಿಂದರೆ ಒಳ್ಳೆಯದು. ಕಡಿಮೆ ಚಪಾತಿ ತಿನ್ನುವುದರಿಂದ ಖಂಡಿತವಾಗಿಯೂ ತೂಕ ಕಡಿಮೆಯಾಗುತ್ತದೆ. ಆದರೆ ಅತಿ ಹೆಚ್ಚು ಚಪಾತಿ ತಿನ್ನುವುದರಿಂದ ತೂಕ ಕೂಡ ಹೆಚ್ಚಾಗುತ್ತದೆ. ಕೇವಲ ಚಪಾತಿ ತಿನ್ನುವುದರಿಂದ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಅದರ ಜೊತೆ ದಿನನಿತ್ಯದ ವ್ಯಾಯಾಮ ಕೂಡ ಮಾಡಬೇಕು. ಆಗ ಮಾತ್ರ ಆರೋಗ್ಯಯುತವಾಗಿ ನಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಇಲ್ಲದಿದ್ದರೆ ನಮ್ಮ ದೇಹದಲ್ಲಿ ಕೊಬ್ಬಿನಂಶ ಜಾಸ್ತಿಯಾಗಿ ನಾವು ಮತ್ತೆ ದಪ್ಪವಾಗಲು ಕಾರಣವಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಚಪಾತಿಯನ್ನು ನಿಯಮಿತವಾಗಿ ಬಳಸಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಯಾವುದೇ ಆಹಾರವಾದರೂ ಸಹ ಮಿತವಾಗಿ ಬಳಸಿದರೆ ಮಾತ್ರ ಅದು ನಮಗೆ ಉಪಯುಕ್ತವಾಗಿರುತ್ತದೆ.





