ಶ್ರೀ ಕೃಷ್ಣ ಬಾಲನಿಕೇತನಕ್ಕೆ ಆಟದ ಉಪಕರಣ ಹಸ್ತಾಂತರ
ಉಡುಪಿ ಜೂ.19 (ಉಡುಪಿ ಟೈಮ್ಸ್ ವರದಿ): ಮಣಿಪಾಲದ ಕೆನರಾ ಬ್ಯಾಂಕ್ ವತಿಯಿಂದ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಆಟದ ಉಪಕರಣಗಳೊಂದಿಗೆ ಮರಳು ಗುಂಡಿ ಕೊಡುಗೆಯನ್ನು ನೀಡಲಾಗಿದೆ.
ಕೆನರಾ ಬ್ಯಾಂಕ್ ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ಈ ಕೊಡುಗೆ ನೀಡಿದ್ದು ಇದನ್ನು ಕೆನರಾ ಬ್ಯಾಂಕ್‌ನ ಮಣಿಪಾಲ ವೃತ್ತ ಕಚೇರಿಯ ಜನರಲ್ ಮೆನೇಜರ್ ಎಚ್ ಕೆ ಗಂಗಾಧರ್ ಅವರು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು ಬ್ಯಾಂಕ್ ಮಕ್ಕಳಿಗಾಗಿ ನೀಡಿದ ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿ, ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಮಚಂದ್ರ ಉಪಾಧ್ಯಾಯರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಣಿಪಾಲ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಪಿ ಕೆ ದಾಸ್, ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಸಂಸ್ಥೆಯ ರಘುರಾಮಾಚಾರ್ಯ, ಬಿ. ಕೆ ನಾರಾಯಣ, ಕೆ ಸುಬ್ರಮಣ್ಯ ಕಾರಂತ, ಗುರುರಾಜ್ ಭಟ್, ಮಾತಾಜಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು.





