ಕುಂದಾಪುರ : ಫೋರ್ತ್ ಫೋಕಸ್ ಗೆ “2025ರ ಗಮನಾರ್ಹ ಸಂಸ್ಥೆ” ಪ್ರಶಸ್ತಿ
ಕುಂದಾಪುರ ಜೂ.18(ಉಡುಪಿ ಟೈಮ್ಸ್ ವರದಿ): ಪ್ರಸಿದ್ಧ ಡಿಜಿಟಲ್ ಸೊಲ್ಯೂಶನ್ ಸಂಸ್ಥೆಯಾದ ಫೋರ್ತ್ ಫೋಕಸ್ ಸಂಸ್ಥೆಗೆ 2025ರಲ್ಲಿ ಗಮನಹರಿಸಬಹುದಾದ ಅತ್ಯುತ್ತಮ ಸಂಸ್ಥೆ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಿಸಿನೆಸ್ ಔಟ್‌ಲೈನ್ ಆಯೋಜಿಸಿದ ಬಿಸಿನೆಸ್ ಎಲೈಟ್ ಅವಾರ್ಡ್ 2025 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2015ರಲ್ಲಿ ಒಬ್ಬ ವ್ಯಕ್ತಿಯಿಂದ ಫ್ರೀಲಾನ್ಸಲರಾಗಿ ಪ್ರಾರಂಭವಾದ ಫೋರ್ತ್‌ಫೋಕಸ್ ಇಂದು 8ಕ್ಕೂ ಅಧಿಕ ದೇಶಗಳಲ್ಲಿ 350ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುವ ಸಂಪೂರ್ಣ ಡಿಜಿಟಲ್ ಏಜೆನ್ಸಿಯಾಗಿ ಬೆಳೆದಿದೆ. ವರ್ಡ್‌ಪ್ರೆಸ್ ವೆಬ್‌ಸೈಟ್ ಅಭಿವೃದ್ಧಿ, ಫಿಗ್ಮಾ-ಇಲಿಮೆಂಟರ್ ಪರಿವರ್ತನೆ ಸೇರಿದಂತೆ ಇ-ಕಾಮರ್ಸ್ ಅಭಿವೃದ್ಧಿ ಮತ್ತು ಕಸ್ಟಮ್ ವೆಬ್ ಅಪ್ಲಿಕೇಶನ್ ಪರಿಹಾರಗಳು, UI/UX ವಿನ್ಯಾಸ, SEO ಆಪ್ಟಿಮೈಸೇಶನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳು, ಬ್ರಾಂಡಿಂಗ್ ಸೇವೆಗಳು, ಟ್ರೇಡ್‌ಮಾರ್ಕ್ ನೋಂದಣಿ ಮತ್ತು ಐಡೆಂಟಿಟಿ ವಿನ್ಯಾಸ, ಹೋಟೆಲ್ ತಂತ್ರಜ್ಞಾನ: ಬುಕ್ಕಿಂಗ್ ಎಂಜಿನ್, ಚಾನೆಲ್ ಮ್ಯಾನೇಜರ್ ಮತ್ತು ರೆವೆನ್ಯೂ ಮ್ಯಾನೇಜ್ಮೆಂಟ್ ಸಾಧನಗಳು ಮುಂತಾದ ಸೇವೆಯನ್ನು ನೀಡುತ್ತಿದೆ.
ಸಂಸ್ಥೆಯ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಅವರು, “ನಾವು ಸೃಜನಾತ್ಮಕತೆ ಮತ್ತು ತಂತ್ರಜ್ಞಾನವನ್ನು ಸಮನುಯಾಯವಾಗಿ ಬಳಸಿ ವ್ಯವಹಾರ ವೃದ್ಧಿಗೆ ಸಾಕ್ಷಿಯಾಗಲು ಮುಂದಾಗಿದ್ದೇವೆ. ಈ ಮಾನ್ಯತೆ ನಮ್ಮ ತಂಡದ ನಿರಂತರ ಶ್ರಮ ಮತ್ತು ದೃಢತೆಗಾಗಿ ಸಿಕ್ಕಿರುವ ಮಾನ್ಯತೆ ಎಂದು ಹೇಳಿದರು.





