ಲಾಕ್ ಡೌನ್ ಹಿನ್ನಲ್ಲೆಯಲ್ಲಿ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಪಂಚಾಯತ್ ಸದಸ್ಯೆ ದಂಪತಿ
ಕೋಟ (ಉಡುಪಿ ಟೈಮ್ಸ್ ವರದಿ): ಇಲ್ಲಿನ ಕುಂದಾಪುರ ತಾಲೂಕಿನ ಬೇಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೆಲಟ್ಟು ಪರಿಸರದ ಪಂಚಾಯತ್ ಸದಸ್ಯೆ ಉಷಾ ನಿತ್ಯಾನಂದ ಕೊಠಾರಿ ದಂಪತಿಗಳು ಲಾಕ್ ಡೌನ್ ಹಿನ್ನಲ್ಲೆಯಲ್ಲಿ ತಮ್ಮ ವ್ಯಾಪ್ತಿಯ ಅಶಕ್ತ ಹಾಗೂ ಸಮಸ್ಯೆಯಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆರೋಗ್ಯ ಕಿಟ್ ವಿತರಿಸುವ ಮೂಲಕ ಮನೆಮಾತಾಗಿದ್ದಾರೆ.
ಮಾನವೀಯತೆ ಎಲ್ಲವುದಕ್ಕಿಂತ ಶ್ರೇಷ್ಠವಾದದ್ದು ಎಂಬ ವಿಚಾರಧಾರೆ ಅರ್ಥೈಸಿಕೊಂಡ ಈ ದಂಪತಿಗಳು ತಮ್ಮ ಭಾಗದಲ್ಲಿ ಲಾಕ್‌ಡೌನ್ ನಿಂದ ಸಮಸ್ಯೆ ಎದುರಿಸುತ್ತಿರು ಕುಟುಂಬಗಳಿಗೆ ಸುಮಾರು ೨ಲಕ್ಷ ರೂ ವೆಚ್ಚದ ದಿನಸಿ ಕಿಟ್ ಹಾಗೂ ಆರೋಗ್ಯ ಕಿಟ್ ವಿತರಿಸುವ ಯೋಜನೆ ರೂಪಿಸಿಕೊಂಡು ಗುರುವಾರ ತಮ್ಮ ವಾಹನದ ಮೂಲಕ ಪ್ರತಿ ಮನೆಗಳಿಗೆ ತೆರಳಿ ಕಿಟ್ ವಿತರಿಸುತ್ತಿದ್ದಾರೆ.
ಜನಪ್ರತಿನಿಧಿಗಳಿಗೆ ಮಾದರಿಯಾದ್ರು ಈ ಸದಸ್ಯೆ ಬೇಳೂರು ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷೆಯಾಗಿ,ಪ್ರಸ್ತುತ ಸದಸ್ಯೆಯಾಗಿ ತನ್ನ ಫ್ಯಾಮಿಲಿಯ ಸಹಯೋಗ ಪಡೆದು ಪತಿ ನಿತ್ಯಾನಂದ ಕೊಠಾರಿಯ ಸಹಾಯ ಪಡೆದು ಗ್ರಾಮದ ಅಗತ್ಯವಿರುವ ಕುಟುಂಬಗಳಿಗೆ ಕಿಟ್ ಹಾಗೂ ಅವರಿಗೆ ಬೇಕಾದ ಸಹಾಯಹಸ್ತ ಚಾಚುವಕಾರ್ಯ ಮನಸ್ಥಿತಿ ಇತರ ಪಂಚಾಯತ್ ಸದಸ್ಯರಿಗೆ ಮಾದರಿ ಎಂದರೆ ತಪ್ಪಾಗಲಾರದು.ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಬೇಳೂರು ಗ್ರಾಮದ ದಿನಗೂಲಿ ಕಾರ್ಮಿಕ ಕುಟುಂಬಗಳಿಗೆ ೪೯ದಿನ ನಿರಂತರ ಊಟೋಪಚಾರದ ವ್ಯವಸ್ಥೆಯಲ್ಲಿ ಪತಿ ಮುಂಚೂಣಿಗೆ ನಿಂತಿರುವುದು ಕಣ್ಣುಂದಿರುವ ವಿಚಾರವಾಗಿದೆ.