ಟ್ರೇಡಿಂಗ್ನಲ್ಲಿ ಹಣ ಹೂಡಿ ಅಧಿಕ ಲಾಭದ ಆಮಿಷ: ವ್ಯಕ್ತಿಗೆ 20 ಲಕ್ಷ ವಂಚನೆ
ಮಣಿಪಾಲ:ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಕೆ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 20ಲಕ್ಷ ರೂ ವಂಚನೆ ಮಾಡಿರುವ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಣಿಪಾಲದ ಸರಳೇಬೆಟ್ಟಿನ ಜಯಂತ್ ಕುಮಾರ್ ಮೊಹಂತಿ (38) ವಂಚನೆಗೊಳಗಾದ ವ್ಯಕ್ತಿ.
ಸಿಟಿ ಗ್ರೂಪ್ ಆಫ್ ಕಂಪೆನಿ ಎಂಬ ಹೆಸರಿನ ಕಂಪೆನಿಯು ಮೊಹಂತಿ ಅವರಿಗೆ ಟ್ರೇಡ್ ಮಾರ್ಕೇಟ್ನಲ್ಲಿ ಹಣ ಹೂಡಿಕೆ ಮಾಡಿ, ಹೆಚ್ಚಿನ ಲಾಭಾಂಶ ಪಡೆಯುವ ಆಮಿಷವೊಡ್ಡಿ, ವಾಟ್ಸ್ಆಪ್ ಸಂಖ್ಯೆಗೆ ಲಿಂಕ್ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಬಳಿಕ ಹಂತ ಹಂತವಾಗಿ 20,37,200 ರೂ ಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ. ನಂತರ ಸರ್ವೀಸ್ ಚಾರ್ಟ್ ಅಕೌಂಟ್ ಕ್ಲಿಯರೆನ್ಸ್ ನೀಡದೇ ಹಣವನ್ನು ಮರುಪಾವತಿ ಮಾಡುವುದಿಲ್ಲ ಎಂದು ಹೇಳಿ ನಂಬಿಸಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





